Ad Widget .

ಉಡುಪಿ: ಕಂಠಪೂರ್ತಿ ಕುಡಿದು ಶಾಲಾ ಜಗಲಿಯಲ್ಲಿ ಮಲಗಿದ ಶಿಕ್ಷಕ

ಸಮಗ್ರ ನ್ಯೂಸ್: ಶಾಲೆಯ ಶಿಕ್ಷಕರೊಬ್ಬರು ಕಂಠಪೂರ್ತಿ ಕುಡಿದು ಶಾಲೆಯ ಜಗಲಿಯಲ್ಲಿಯೇ ಮಲಗಿದ ಪ್ರಕರಣವೊಂದು ಉಡುಪಿಯ ಪೆರ್ಡೂರು ಗ್ರಾಮದ ಅಲಂಗಾರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವರದಿಯಾಗಿದೆ. ಕೃಷ್ಣಮೂರ್ತಿ ಎಂಬವರೇ ಕಂಠಪೂರ್ತಿ ಕುಡಿದು ಜಗುಲಿಯಲ್ಲಿ ಮಲಗಿದ ಶಿಕ್ಷಕ.

Ad Widget . Ad Widget .

ಶಾಲೆಯ ಕೊಠಡಿಯಲ್ಲಿ ಮಕ್ಕಳು ಅವರ ಪಾಡಿಗೆ ಇದ್ದರೆ, ಈ ಶಿಕ್ಷಕ ಮಾತ್ರ ಮದ್ಯದ ಅಮಲಿನಲ್ಲಿ ತೇಲಾಡುತ್ತಾ ಶಾಲೆ ಆವರಣದ ಜಗುಲಿಯಲ್ಲಿಯೇ ಹೊರಳಾಡುತ್ತಾ ಮಲಗಿದ್ದರು.

Ad Widget . Ad Widget .

ಮದ್ಯ ಕುಡಿದು ಮಲಗಿರುವ ದೃಶ್ಯವನ್ನು ಸ್ಥಳೀಯರೊಬ್ಬರು ಚಿತ್ರೀಕರಿಸಿಕೊಂಡಿದ್ದಲ್ಲದೆ, ಸಾಮಾಜಿಕ ಜಾಲತಾಣದಲ್ಲಿಯೂ ಹರಿಬಿಟ್ಟಿದ್ದಾರೆ. ಈ ವಿಡಿಯೊ ಈಗ ವೈರಲ್‌ ಆಗಿದೆ. ಮಕ್ಕಳ ಭವಿಷ್ಯ ರೂಪಿಸಬೇಕಾದ ಶಿಕ್ಷಕ ಶಾಲಾ ಅವಧಿಯಲ್ಲಿಯೇ ಕುಡಿದು, ಶಾಲಾ ಆವರಣದಲ್ಲಿಯೇ ಮಲಗಿರುವುದು ಸ್ಥಳೀಯರು ಸೇರಿದಂತೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಶಿಕ್ಷಕನನ್ನು ಕೂಡಲೇ ಅಮಾನತು ಮಾಡುವಂತೆ ಪೆರ್ಡೂರು ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು, ಸಾಮಾಜಿಕ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿ ಮನವಿ ಸಲ್ಲಿಸಲಾಗಿದೆ.

Leave a Comment

Your email address will not be published. Required fields are marked *