Ad Widget .

ಹಾಡುಹಗಲೇ ಗುಂಡಿಕ್ಕಿ ನಟಿಯ ಹತ್ಯೆಗೈದ ಆಗಂತುಕರು| ಪತಿಯ ಮೇಲೆ ಪೊಲೀಸ್ ಕಣ್ಣು!!

ಸಮಗ್ರ ನ್ಯೂಸ್: ನಟಿಯೊಬ್ಬರನ್ನು ಹಾಡ ಹಗಲೆ ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ. ಜಾರ್ಖಂಡ್‌ ರಾಜ್ಯದ ಜನಪ್ರಿಯ ನಟಿ ರಿಯಾ ಕುಮಾರಿ ಎಂಬುವರನ್ನು ಅಗಂತುಕರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಆದರೆ ಈ ಘಟನೆಯ ಹಿಂದೆ ರಿಯಾಳ ಪತಿ ಪ್ರಕಾಶ್ ಕುಮಾರ್‌ ನ ಕೈವಾಡವಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

Ad Widget . Ad Widget .

ರಿಯಾ ಕುಮಾರಿ ತಮ್ಮ ಎರಡು ವರ್ಷದ ಪುತ್ರಿ ಹಾಗೂ ನಟಿ ರಿಯಾ ಕುಮಾರಿ ಒಟ್ಟಿಗೆ ರಾಂಚಿಯಿಂದ ಕೊಲ್ಕತ್ತಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಗೆ ತಲುಪಿದಾಗ ಪತಿ ಪ್ರಕಾಶ್ ಕುಮಾರ್, ವಿರಾಮ ತೆಗೆದುಕೊಳ್ಳಲೆಂದು ಮಹಿಷ್ರೇಕಾ ಹೆಸರಿನ ಬ್ರಿಡ್ಜ್‌ ಬಳಿ ಕಾರು ನಿಲ್ಲಿಸಿ ಕೆಳಗಿಳಿದಿದ್ದಾರೆ. ಆಗ ಬೈಕಿನಲ್ಲಿ ಬಂದ ಮೂವರು ಅಗಂತುಕರು ಪ್ರಕಾಶ್ ಕುಮಾರ್‌ರ ದರೋಡೆಗೆ ಯತ್ನಿಸಿದ್ದಾರೆ. ಆಗ ಅವರನ್ನು ತಡೆಯಲು ಬಂದ ನಟಿ ರಿಯಾ ಕುಮಾರಿಗೆ ಅಗಂತುಕರು ಹತ್ತಿರದಿಂದಲೇ ಗುಂಡು ಹೊಡೆದ ಕಾರಣ ನಟಿ ತೀವ್ರವಾಗಿ ಗಾಯಗೊಂಡಿದ್ದಾರೆ.

Ad Widget . Ad Widget .

ಗಾಯಗೊಂಡ ಪತ್ನಿಯನ್ನು ಕಾರಿನಲ್ಲಿ ಹಾಕಿಕೊಂಡು ಪ್ರಕಾಶ್ ಕುಮಾರ್ ಸುಮಾರು ಮೂರು ಕಿ.ಮೀ ಡ್ರೈವ್ ಮಾಡಿ ರಾಜಾಪುರ ಪೊಲೀಸ್ ಠಾಣೆಗೆ ತಲುಪಿದ್ದಾರೆ. ಅಲ್ಲಿಂದ ಮತ್ತೆ ನಟಿಯನ್ನು ಉಳುಬೇರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ವೈದ್ಯರು ರಿಯಾರನ್ನು ಮೃತ ಎಂದು ಘೋಷಿಸಿದ್ದಾರೆ. ತೀರ ಹತ್ತಿರದಿಂದ ಬಂದೂಕು ಚಲಾಯಿಸಿರುವ ಕಾರಣ ನಟಿಯ ಕಿವಿಯ ಒಳಗೆ ಗಾಯವಾಗಿ ತೀವ್ರವಾಗಿ ರಕ್ತಸ್ರಾವವಾಗಿ ನಟಿ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.

ಘಟನೆ ನಡೆದಿರುವ 16ನೇ ರಾಷ್ಟ್ರೀಯ ಹೆದ್ದಾರಿಯಲ್ಲಿನ ಸಿಸಿಟಿವಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಹಾಗೂ ಘಟನೆ ನಡೆದ ಸ್ಥಳದಲ್ಲಿ ಬುಲೆಟ್‌ಗಾಗಿಯೂ ಹುಡುಕಾಟ ನಡೆದಿದೆ. ಜೊತೆಗೆ ಪ್ರಕಾಶ್ ಕುಮಾರ್‌ರ ಕಾರನ್ನು ಸೀಜ್ ಮಾಡಿಕೊಂಡಿದ್ದು, ಅದರಲ್ಲಿಯೂ ಸಾಕ್ಷ್ಯಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

ಪ್ರಕಾಶ್ ಕುಮಾರ್ ಹೇಳಿಕೆ ದಾಖಲಿಸಿಕೊಂಡಿರುವ ಪೊಲೀಸರು ಆತನ ಹೇಳಿಕೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಪ್ರಕಾಶ್ ಕುಮಾರ್‌ ಕುರಿತಂತೆಯೂ ತನಿಖೆ ನಡೆಯುತ್ತಿದೆ. ಪ್ರಕಾಶ್ ಕುಮಾರ್ ಹೇಳಿಕೆಗಳು ಗೊಂದಲದಿಂದ ಕೂಡಿವೆ ಎಂದು ಪೊಲೀಸರು ಹೇಳಿದ್ದಾರೆ. ರಿಯಾ ಜಾರ್ಖಂಡ್ ನ ಪ್ರಸಿದ್ದ ನಟಿಯಾಗಿದ್ದರು.

Leave a Comment

Your email address will not be published. Required fields are marked *