ಶಾಲಾ ಬಾಲಕಿಯೊಂದಿಗೆ ಓಡಿಹೋದ ಪಿಎಸ್ಐ!!

ಸಮಗ್ರ ನ್ಯೂಸ್: ಪೊಲೀಸ್ ಸಬ್ ಇನ್ಸ್‌ಪೆಕ್ಟರ್​​ವೊಬ್ಬರು ಶಾಲಾ ಬಾಲಕಿಯೊಂದಿಗೆ ಓಡಿ ಹೋಗಿರುವ ಘಟನೆ ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ನಡೆದಿದೆ. ಬಾಲಕಿಯ ತಂದೆ ರಾಜಧಾನಿ ಲಖನೌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

Ad Widget ... ..

ಜೋಗೇಂದ್ರ ಸಿಂಗ್ ಎಂಬುವವರೇ ಬಾಲಕಿಯೊಂದಿಗೆ ಪಲಾಯನ ಮಾಡಿರುವ ಎಸ್​ಐ. ಈ ಘಟನೆಯು ಬಾಲಕಿಯ ಕುಟುಂಬಸ್ಥರು, ಸಂಬಂಧಿಕರೂ ಸೇರಿದಂತೆ ಇಡೀ ಪ್ರದೇಶದಲ್ಲಿ ಆಘಾತ ಉಂಟುಮಾಡಿದೆ. ಇಲ್ಲಿನ ಪಲಿಯಾ ಚೌಕಿ ಪ್ರಭಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜೋಗೇಂದ್ರ ಸಿಂಗ್ ಎರಡು ದಿನಗಳ ಹಿಂದೆ ಬಾಲಕಿಯೊಂದಿಗೆ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

Ad Widget

ಆರೋಪಿ ಜೋಗೇಂದ್ರ ಸಿಂಗ್​ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದೆ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರು ಹಾಜರಾಗಿದ್ದರು. ಈ ಬಾಲಕಿಯೊಂದಿಗೆ ಸ್ನೇಹ ಬೆಳೆಸಿದ್ದ ಎಸ್​ಐ ಆಗಾಗ್ಗೆ ಆಕೆಯೊಂದಿಗೆ ಕಾಣಿಸಿಕೊಳ್ಳುತ್ತಿದ್ದ ಎಂಬ ಮಾಹಿತಿ ದೊರೆತಿದೆ.

Leave a Comment

Your email address will not be published. Required fields are marked *