ಚಿಕ್ಕಮಗಳೂರು: ಕಚ್ಚಿದ ಹಾವನ್ನೇ ಆಸ್ಪತ್ರೆಗೆ ಹಿಡಿದುಕೊಂಡು ಬಂದ ಭೂಪ

ಸಮಗ್ರ ನ್ಯೂಸ್: ತನ್ನನ್ನು ಕಚ್ಚಿದ ಹಾವನ್ನೇ ಹಿಡಿದುಕೊಂಡು ಆಸ್ಪತ್ರೆಗೆ ಬಂದ ಘಟನೆ ಚಿಕ್ಕಮಗಳೂರಿನ ತರೀಕೆರೆ ತಾಲೂಕಿನಲ್ಲಿ ಸಂಭವಿಸಿದೆ. ಕೊಲ್ಕತ್ತಾ ಮೂಲದ ಆಸೀಫ್ ಹಾವಿನ ಸಮೇತ ಆಸ್ಪತ್ರೆಗೆ ಬಂದ ವ್ಯಕ್ತಿ. ತರೀಕೆರೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕೆಲಸಕ್ಕೆಂದು ಬಂದಿದ್ದ ಆಸೀಫ್, ಊರಿಗೆ ಹೋಗಲು ರೈಲ್ವೆ ನಿಲ್ದಾಣದ ಬಳಿ ತೆರಳಿದ್ದ.

Ad Widget ... ..

ಈ ವೇಳೆ ಆಸೀಫ್​ಗೆ ಹಾವು ಕಚ್ಚಿದೆ. ಚಿಕಿತ್ಸೆ ಪಡೆಯಲು ಅನುಕೂಲವಾಗಲೆಂದು ಹಾಗೂ ತನಗೆ ಕಚ್ಚಿದ ಯಾವು ಯಾವುದೆಂದು ವೈದ್ಯರಿಗೆ ಗೊತ್ತಾಗಲೆಂದು ಆ ಹಾವನ್ನೇ ಕೈಯಲ್ಲಿ ಹಿಡಿದುಕೊಂದು ನೇರವಾಗಿ ಆಸ್ಪತ್ರೆಗೆ ತೆರಳಿದ್ದಾನೆ.

Ad Widget

ಆಸೀಫ್​ನ ಕೈಯಲ್ಲಿದ್ದ ಜೀವಂತ ಕೊಳಕು ಮಂಡಳ ಹಾವನ್ನು ಕಂಡು ಆಸ್ಪತ್ರೆ ಸಿಬ್ಬಂದಿ ಅರೆಕ್ಷಣ ಭಯಗೊಂಡಿದ್ದಾರೆ. ಹಾವು ಕಚ್ಚಿದ್ದಕ್ಕೆ ಚಿಕಿತ್ಸೆ ಪಡೆಯಲು ಬಂದಿದ್ದಾನೆ ಎಂಬ ಸುದ್ದಿ ಕೇಳಿ ನಿಟ್ಟುಸಿರುಬಿಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಆಸೀಫ್​ಗೆ ಚಿಕಿತ್ಸೆ ನೀಡಲಾಗಿದೆ.

Leave a Comment

Your email address will not be published. Required fields are marked *