Ad Widget .

ಹೊಸ ವರ್ಷಕ್ಕೆ ಬರಲಿದೆ ಕೋವಿಡ್ ಗೆ ನಾಸಿಕ ಲಸಿಕೆ| ಡೋಸೇಜ್, ರೇಟ್ ಎಲ್ಲದರ ಸಂಪೂರ್ಣ ಮಾಹಿತಿ ಇಲ್ಲಿದೆ…

ಸಮಗ್ರ ನ್ಯೂಸ್: ಕೋವಿಡ್ ಸಾಂಕ್ರಾಮಿಕತೆಗೆ ಕಡಿವಾಣ ಹಾಕಲು ಬೂಸ್ಟರ್ ಡೋಸ್ ಆಗಿ ಅಭಿವೃದ್ಧಿಪಡಿಸಲಾಗಿರುವ ಮೂಗಿನ ಮೂಲಕ ನೀಡಲಾಗುವ ಭಾರತ್ ಬಯೋಟೆಕ್​ನ ಇನ್​ಕೋವ್ಯಾಕ್ ಲಸಿಕೆ ಜನವರಿ ನಾಲ್ಕನೇ ವಾರ ಮಾರುಕಟ್ಟೆಗೆ ಬರಲಿದೆ. ಈ ನಾಸಿಕ ಲಸಿಕೆ ಪಡೆಯಲು ಕೋವಿನ್ ಪೋರ್ಟಲ್​ನಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ಭಾರತ್ ಬಯೋಟೆಕ್ ಮಂಗಳವಾರ ಪ್ರಕಟಿಸಿದೆ.

Ad Widget . Ad Widget .

ಖಾಸಗಿ ಆಸ್ಪತ್ರೆಗಳಲ್ಲಿ ಕೊಡಲಾಗುವ ಈ ಲಸಿಕೆಯ ಪ್ರತಿ ಡೋಸ್ ಬೆಲೆ 800 ರೂಪಾಯಿಯಾಗಿದ್ದು ತೆರಿಗೆ ಪ್ರತ್ಯೇಕವಾಗಿರುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೊಡ್ಡ ಪ್ರಮಾಣದಲ್ಲಿ ಖರೀದಿಸಿದರೆ ಪ್ರತಿ ಡೋಸ್​ಗೆ 325 ರೂಪಾಯಿಯಂತೆ ಒದಗಿಸಲಾಗುವುದೆಂದು ದೇಶದ ಪ್ರಮುಖ ಔಷಧ ತಯಾರಕ ಕಂಪನಿಗಳಲ್ಲಿ ಒಂದಾದ ಭಾರತ್ ಬಯೋಟೆಕ್ ಹೇಳಿದೆ.

Ad Widget . Ad Widget .

ಇನ್​ಕೋವ್ಯಾಕ್ ಲಸಿಕೆಯನ್ನು 18 ವರ್ಷ ಮೇಲ್ಪಟ್ಟವರಿಗೆ ಮುನ್ನೆಚ್ಚರಿಕೆ (ಬೂಸ್ಟರ್) ಡೋಸ್ ಆಗಿ ನೀಡಲು ಬಿಡುಗಡೆ ಮಾಡಲಾಗುತ್ತದೆ. ಇನ್​ಕೋವ್ಯಾಕ್, ಪ್ರಾಥಮಿಕ 2-ಡೋಸ್ ಆಗಿ ನೀಡಲು ಹಾಗೂ ವಿಜಾತೀಯ ಡೋಸ್ ಆಗಿಯೂ ನೀಡಲು ಒಪ್ಪಿಗೆ ಸಿಕ್ಕಿರುವ ಜಗತ್ತಿನ ಪ್ರಥಮ ನಾಸಿಕ ಲಸಿಕೆಯಾಗಿದೆ. ದೇಶದಾದ್ಯಂತ 14 ಸ್ಥಳಗಳಲ್ಲಿ 3ನೇ ಹಂತದ ಪರೀಕ್ಷೆ ಹಾಗೂ 9 ಸ್ಥಳಗಳಲ್ಲಿ ವಿಜಾತೀಯ ಪರೀಕ್ಷೆ ನಡೆಸಲಾಗಿದೆ ಎಂದು ಕಂಪನಿ ತಿಳಿಸಿದೆ. ಅಮೆರಿಕದ ಸೇಂಟ್ ಲೂಯಿಸ್​ನ ವಾಷಿಂಗ್ಟನ್ ಯುನಿವರ್ಸಿಟಿ ಪಾಲುದಾರಿಕೆಯಲ್ಲಿ ಈ ವ್ಯಾಕ್ಸಿನ್ ಅಭಿವೃದ್ಧಿಪಡಿಸಲಾಗಿದೆ.

Leave a Comment

Your email address will not be published. Required fields are marked *