Ad Widget .

ಆಹಾರದಲ್ಲಿ ಮೀನಿನ ಖಾದ್ಯ ಎಷ್ಟು ಪ್ರಯೋಜನಕಾರಿ ಗೊತ್ತಾ? ಇಲ್ಲಿದೆ ಫುಲ್ ಡೀಟೈಲ್ಸ್

ಸಮಗ್ರ ನ್ಯೂಸ್: ಮೀನಿನ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುತ್ತಾರೆ ತಜ್ಞರು. ನೀವು ನಾನ್ ವೆಜ್ ತಿನ್ನಲು ಇಷ್ಟಪಡುವುದಾದರೆ, ಆಹಾರದಲ್ಲಿ ಮೀನನ್ನು ಸೇರಿಸಲು ಮರೆಯಬೇಡಿ. ಮೀನು ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ. ರುಚಿಕರವಾಗಿರುವ ಜೊತೆಗೆ, ಮೀನು ತಿನ್ನುವುದು ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನಕಾರಿ.

Ad Widget . Ad Widget .

ಮೀನು ತಿನ್ನುವುದರಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ ಮತ್ತು ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ. ಅಲ್ಲದೇ, ಮೀನು ಸೇವಿಸುವುದರಿಂದ ದೇಹದಲ್ಲಿ ವಿಟಮಿನ್ ಡಿ ಕೊರತೆ ಕಡಿಮೆಯಾಗುತ್ತದೆ.

Ad Widget . Ad Widget .

ಮೀನಿನಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳಿವೆ, ದೇಹಕ್ಕೆ ಇದನ್ನು ತಯಾರಿಸಲು ಸಾಧ್ಯವಾಗುವುದಿಲ್ಲ, ಅಂತಹ ಪರಿಸ್ಥಿತಿಯಲ್ಲಿ ಆಹಾರ ಪದಾರ್ಥಗಳ ಸೇವನೆಯಿಂದ ದೇಹದಲ್ಲಿ ಒಮೆಗಾ -3 ಕೊಬ್ಬಿನಾಮ್ಲವನ್ನು ಮರುಪೂರಣಗೊಳಿಸಬಹುದು. ಮೀನಿನಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳು ಸಮೃದ್ಧವಾಗಿವೆ. ಆದ್ದರಿಂದ ಇದರ ಸೇವನೆಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದಲ್ಲದೇ ಇನ್ನೂ ಹಲವು ರೀತಿಯ ಪೋಷಕಾಂಶಗಳು ಮೀನಿನಲ್ಲಿ ಕಂಡುಬರುತ್ತವೆ. ಅವುಗಳ ಬಗ್ಗೆ ತಿಳಿಯೋಣ ಬನ್ನಿ…

೧) ಕಣ್ಣಿನ ದೃಷ್ಟಿ ಸುಧಾರಣೆ : ಮೀನಿನಲ್ಲಿರುವ ಒಮೆಗಾ-3 ಕೊಬ್ಬಿನಾಮ್ಲಗಳು ದೃಷ್ಟಿ ಮತ್ತು ಕಣ್ಣಿನ ಆರೋಗ್ಯವನ್ನು ಸುಧಾರಿಸಲು ಸಹಾಯಕ. ಏಕೆಂದರೆ ಮೆದುಳು ಮತ್ತು ಕಣ್ಣುಗಳು ಅರೋಗ್ಯ ಉತ್ತಮವಾಗಿರಲು ಒಮೆಗಾ-3 ಕೊಬ್ಬಿನಾಮ್ಲಗಳು ದಿವ್ಯ ಔಷಧಿಯಾಗಿದೆ.

೨) ಮೆದುಳನ್ನು ಚುರುಕಾಗಿಸುತ್ತದೆ: ಮೀನಿನ ಸೇವನೆಯಿಂದ ಮೆದುಳು ಬಲಗೊಳ್ಳುತ್ತದೆ. ಇದರಲ್ಲಿರೋ ಪ್ರೋಟೀನ್ ಹೊಸ ಕೋಶಗಳ ರಚನೆಗೆ ಸಹಾಯ ಮಾಡುತ್ತದೆ, ಇದು ನಿಮ್ಮ ಮೆದುಳನ್ನು ಚುರುಕುಗೊಳಿಸುತ್ತದೆ. ಇದು ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿದೆ, ಇದು ನೆನಪಿನ ಸಾಮರ್ಥ್ಯವನ್ನು ಕೂಡ ಸುಧಾರಿಸುತ್ತೆ. ಹೆಚ್ಚು ಮೀನನ್ನು ಸೇವಿಸುವ ಜನರು ಮಾನಸಿಕ ಕ್ಷೀಣತೆಯ ನಿಧಾನಗತಿಯನ್ನು ಹೊಂದಿರುತ್ತಾರೆ.

೩)ಚರ್ಮದ ಸುಕ್ಕುಗಳ ನಿವಾರಣೆ : ಮೀನಿನ ಎಣ್ಣೆಯನ್ನು ಚರ್ಮಕ್ಕೆ ಹಚ್ಚುವುದರಿಂದ ಚರ್ಮದ ಸುಕ್ಕುಗಳು ಕಡಿಮೆಯಾಗುತ್ತವೆ. ಅದೇ ಸಮಯದಲ್ಲಿ, ಮೀನುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ವಯಸ್ಸಾದ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

೪) ಹೃದಯಕ್ಕೆ ಒಳ್ಳೆಯದು : ಮೀನಿನಲ್ಲಿರುವ ಒಮೆಗಾ 3 ಕೊಬ್ಬಿನಾಮ್ಲಗಳು ಮತ್ತು ವಿಟಮಿನ್ ಇ ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ತಿಳಿದುಬಂದಿದೆ. ಮೀನನ್ನು ಹೆಚ್ಚು ಎಣ್ಣೆಯಲ್ಲಿ ಫ್ರೈ ಮಾಡಿ ಸೇವಿಸದಿರಿ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ನೀವು ಮೀನಿನ ಸಾರು ಮಾಡಿ ಸೇವಿಸಿದರೆ ಬಹಳ ಒಳ್ಳೆಯದು. ಹೆಚ್ಚಿನ ಒಮೆಗಾ -3 ಕೊಬ್ಬಿನಾಮ್ಲದ ಅಂಶದಿಂದಾಗಿ ಕೊಬ್ಬಿನ ರೀತಿಯ ಮೀನುಗಳು ಹೃದಯದ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ.

೫) ಉತ್ತಮನಿದ್ರೆ: ನಿದ್ರೆ ಸಮಸ್ಯೆ ಇದ್ದರೆ, ಹೆಚ್ಚು ಮೀನು ತಿನ್ನುವುದನ್ನು ರೂಢಿಸಿಕೊಳ್ಳಿ. ಮೀನಿನ ಸೇವನೆ ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ಅಧ್ಯಯನದ ಪ್ರಕಾರ, ನಿದ್ರೆಗೆ ಸಹಾಯ ಮಾಡುವ ವಿಟಮಿನ್ ಡಿ ಮೀನಿನಲ್ಲಿರುವ ಕಾರಣ ನಿದ್ರೆ ಚೆನ್ನಾಗಿ ಬರುತ್ತದೆ.

Leave a Comment

Your email address will not be published. Required fields are marked *