Ad Widget .

ಬೆಳ್ತಂಗಡಿ: ಬಸ್‌ಗಳ ನಡುವೆ ಅಪಘಾತ – ಇಬ್ಬರು ಗಂಭೀರ

ಬೆಳ್ತಂಗಡಿ: ಮಕ್ಕಳ ಪ್ರವಾಸದ ಬಸ್‌ ಹಾಗೂ ಕೆಎಸ್‌‌ಆರ್‌‌ಟಿಸಿ ಬಸ್‌ ನಡುವೆ ಅಪಘಾತದ ಪರಿಣಾಮ ಇಬ್ಬರು ಗಂಭೀರ ಗಾಯಗೊಂಡ ಘಟನೆ ನಿಡ್ಲೆ ಗ್ರಾಮದ ಬೂಡುಜಾಲು ಸಮೀಪ ಸಂಭವಿಸಿದೆ

Ad Widget . Ad Widget .

ಟೂರಿಸ್ಟ್‌ ಬಸ್‌ ಚಾಲಕ ಅಭಿಷೇಕ್‌ ಹಾಗೂ ಬಸ್‌ ಪ್ರಯಾಣಿಕ ದುಗೇಶ್‌ ಗಂಭೀರ ಗಾಯಗೊಂಡವರು. ಸಿಂಧನೂರಿನ ಕಾಲೇಜು ವಿದ್ಯಾರ್ಥಿಗಳ ಪ್ರವಾಸದ ಟೂರಿಸ್ಟ್‌ ಬಸ್‌ ಧರ್ಮಸ್ಥಳ ಕಡೆಗೆ ಪ್ರಯಾಣಿಸುತ್ತಿದ್ದಾಗ ಕೊಕ್ಕಡ ಕಡೆಗೆ ಹೋಗುವ ಕೆಎಸ್ಸಾರ್ಟಿಸಿ ಬಸ್‌ ಢಿಕ್ಕಿ ಹೊಡೆದಿದೆ.

Ad Widget . Ad Widget .

ಇನ್ನು ಚಾಲಕರ ಸಹಿತ ಬಸ್‌ನಲ್ಲಿದ್ದ ಮಕ್ಕಳು ಹಾಗೂ ಪ್ರಯಾಣಿಕರು ಗಾಯಗೊಂಡಿದ್ದು ಗಾಯಾಳುಗಳನ್ನು ಸ್ಥಳೀಯ ಶೌರ್ಯ ತಂಡದವರ ನೇತೃತ್ವದಲ್ಲಿ ಉಜಿರೆ ಹಾಗೂ ಪುತ್ತೂರಿನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಪ್ರವಾಸದ ಬಸ್‌ನಲ್ಲಿ ಒಟ್ಟು 40 ವಿದ್ಯಾರ್ಥಿಗಳು ಹಾಗೂ ನಾಲ್ವರು ಉಪನ್ಯಾಸಕರು ಮತ್ತು ಒಬ್ಬ ಅಡುಗೆ ಸಹಾಯಕರು ಕೂಡ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

Leave a Comment

Your email address will not be published. Required fields are marked *