Ad Widget .

ಚಾಮರಾಜನಗರ: ಬಿಳಿಕಲ್ಲು ಕ್ವಾರಿ ಕುಸಿದು ಇಬ್ಬರು ಸಾವು

ಸಮಗ್ರ ನ್ಯೂಸ್: ಬಿಳಿಕಲ್ಲು ಕ್ವಾರಿ ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ ಬಿಸಲವಾಡಿ ಗ್ರಾಮದಲ್ಲಿ ನಡೆದಿದೆ.

Ad Widget . Ad Widget .

ಚಾಮರಾಜನಗರ ತಾಲೂಕಿನ ಕಾಗಲವಾಡಿ ಮೋಳೆ ಗ್ರಾಮದ ಶಿವರಾಜು ಹಾಗೂ ಕುಮಾರ್ ಮೃತ ದುರ್ದೈವಿಗಳು‌. ಸಿದ್ದರಾಜು ಎಂಬಾತ ಬಚಾವ್​ ಆದರೂ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ.

Ad Widget . Ad Widget .

ರೇಣುಕಾದೇವಿ ಎಂಬುವರ ಹೆಸರಿನಲ್ಲಿ ಈ ಬಿಳಿಕಲ್ಲು ಕ್ವಾರಿಯ ಪರವಾನಗಿ ಇತ್ತು. ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗುಡ್ಡ ಕುಸಿತ ಪ್ರಕರಣ ಮಾಸುವ ಮುನ್ನವೇ ಈ ದುರಂತ ನಡೆದಿರುವುದು ವಿಪರ್ಯಾಸವಾಗಿದೆ. ಗಣಿಗಾರಿಕೆ ಅಧಿಕಾರಿಗಳ ಜಾಣಮೌನದಿಂದ ದುರಂತ ಮರುಕಳಿಸಿರುವ ಆರೋಪ ಕೇಳಿಬಂದಿದೆ. ಸ್ಥಳಕ್ಕೆ ಅಧಿಕಾರಿಗಳು ತೆರಳಿದ್ದಾರೆ‌.

Leave a Comment

Your email address will not be published. Required fields are marked *