Ad Widget .

ಶಾಲೆಗೆ ಚಕ್ಕರ್ ಹಾಕಿ ಶಿಕ್ಷಕರ ಎಣ್ಣೆ ಪಾರ್ಟಿ| ಶಿಸ್ತು ಕ್ರಮ ಕೈಗೊಳ್ಳಲು ಶಿಫಾರಸ್ಸು

ಸಮಗ್ರ ನ್ಯೂಸ್: ಶಾಲೆಗೆ ಚಕ್ಕರ್ ಹಾಕಿ ಶಿಕ್ಷಕರು ಎಣ್ಣೆ ಪಾರ್ಟಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಶಿಕ್ಷಕರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ.

Ad Widget . Ad Widget .

ಕಾಲೇಜಿನ ಪ್ರಾಂಶುಪಾಲ ಮುರಳಿಧರ ಕುಲಕರ್ಣಿ, ಸಹ ಶಿಕ್ಷಕರಾದ ಲಿಂಗಪ್ಪ ಪೂಜಾರ್, ಕೇಶವಕುಮಾರ್, ಅಬ್ದುಲ್ ಅಜಿಜ್, ಚೆನ್ನಪ್ಪ ರಾಥೋಡ್ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ. ರಾಯಚೂರು ಡಿಡಿಪಿಐ ವೃಷಭೇಂದ್ರಯ್ಯ ಕಲಬುರ್ಗಿಯ ಶಿಕ್ಷಣ ಆಯುಕ್ತರಿಗೆ ಪತ್ರ ಬರೆದು ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿದ್ದಾರೆ.

Ad Widget . Ad Widget .

ಶಾಲಾ ಅವಧಿಯಲ್ಲಿ ಮಕ್ಕಳನ್ನು ಮನೆಗೆ ಕಳುಹಿಸುವ ಶಿಕ್ಷಕರು ಡಾಬಾದಲ್ಲಿ ಚಿಕನ್, ಮಟನ್ ಸೇವಿಸುತ್ತಿದ್ದಾರೆ. ಇದಕ್ಕಾಗಿ ಮಧ್ಯಾಹ್ನ ನಂತರದ ತರಗತಿಗಳನ್ನು ಬಂದ್ ಮಾಡಿ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸುತ್ತಿದ್ದಾರೆ ಎಂದು ಪೋಷಕರು ದೂರಿದ್ದಾರೆ.

ಶಿಕ್ಷಕರು ಡಾಬಾದಲ್ಲಿ ಮದ್ಯ ಸೇವಿಸುತ್ತಿರುವ ವಿಡಿಯೋವನ್ನು ಪೋಷಕರು ಸೆರೆ ಹಿಡಿದಿದ್ದಾರೆ. ಜೊತೆಗೆ ಶಾಲೆಯ ತರಗತಿ ಕೊಠಡಿಗಳಲ್ಲೂ ಮೊಬೈಲ್​​ನಲ್ಲಿ ಜಿಪಿಎಸ್ ಸಮೇತ ಪೋಷಕರು ಫೋಟೋ ಸೆರೆ ಹಿಡಿದು ದೂರು‌ ನೀಡಿದ್ದರು.

Leave a Comment

Your email address will not be published. Required fields are marked *