ಸಮಗ್ರ ನ್ಯೂಸ್: ಕೊರೊನಾ ಕಂಟ್ರೋಲ್ ಮಾಡಲು ಮೂಗಿನ ಮೂಲಕ ಹಾಕುವ ಕೊರೊನಾ ಲಸಿಕೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಕೇಂದ್ರ ಸರ್ಕಾರ ಶುಕ್ರವಾರ (ಡಿ. 22) ಕೋವಿಡ್ -19 ನ ನಾಸಲ್ ಲಸಿಕೆ ಬಳಕೆಯನ್ನು ಅನುಮೋದಿಸಿದೆ.
ಈ ವ್ಯಾಕ್ಸಿನ್ ಭಿನ್ನರೂಪದ ಬೂಸ್ಟರ್ ಆಗಿ ಬಳಸಲ್ಪಡುತ್ತದೆ. ವರದಿಗಳ ಪ್ರಕಾರ, ಕೊರೊನಾವೈರಸ್‌ಗಾಗಿ ಮೂಗಿನ ಲಸಿಕೆಯನ್ನು ಇಂದಿನಿಂದ Covd-19 ಲಸಿಕೆ ಕಾರ್ಯಕ್ರಮದಲ್ಲಿ ಸೇರಿಸಲಾಗುವುದು ಮತ್ತು ಅದು ಖಾಸಗಿ ಆಸ್ಪತ್ರೆಯಲ್ಲಿ ಲಭ್ಯವಿರುತ್ತದೆ.
ಭಾರತ್ ಬಯೋಟೆಕ್ ಮೂಗಿನ ಲಸಿಕೆಯನ್ನು ಅನುಮೋದಿಸಲಾಗಿದೆ ಮತ್ತು ಕೋವಿನ್ ಅಪ್ಲಿಕೇಶನ್‌ನಲ್ಲಿ ಸೇರಿಸಲಾಗುವುದು ಎಂದು ಆರೋಗ್ಯ ಸಚಿವ ಡಾ ಮನ್ಸುಖ್ ಮಾಂಡವಿಯಾ ಹೇಳಿದರು.
ಭಾರತ ಸರ್ಕಾರವು ನಾಸಲ್ ಲಸಿಕೆಯನ್ನು ಅನುಮೋದಿಸಿದೆ. ಇದನ್ನು ಹೆಟೆರೊಲಾಜಸ್ ಬೂಸ್ಟರ್ ಆಗಿ ಬಳಸಲಾಗುವುದು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಮೊದಲು ಲಭ್ಯವಿರುತ್ತದೆ. ಇಂದಿನಿಂದ ಕೋವಿಡ್ ಲಸಿಕೆ ಕಾರ್ಯಕ್ರಮದಲ್ಲಿ ಇದನ್ನು ಸೇರಿಸಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.