ಸಮಗ್ರ ನ್ಯೂಸ್: ಯುವಜನರ ಸೌಂದರ್ಯಕ್ಕೆ ಕೊಳ್ಳಿ ಇಡುವುದು ಮೊಡವೆ. ಮುಖದ ಸೌಂದರ್ಯವನ್ನು ಕಾಪಿಟ್ಟುಕೊಳ್ಳಲು ಮಾರುಕಟ್ಟೆಯಲ್ಲಿ ಅನೇಕ ಕ್ರೀಮುಗಳು, ಪೇಶಿಯಲ್ ಗಳು ದೊರೆಯುತ್ತವೆ. ಆದರೂ ಈ ಮೊಡವೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದು. ಈ ಮೊಡವೆಯಿಂದ ಬಚಾವಾಗಲು ಕೆಲವು ಸರಳ ಟಿಪ್ಸ್ ಗಳು ಇಲ್ಲಿವೆ.
ಮೂಸಂಬಿ ಸಿಟ್ರಸ್ ಅಂಶವಿರುವ ಹಣ್ಣು. ಬೇಸಿಗೆಯಲ್ಲಂತೂ ಮೂಸಂಬಿ ಜ್ಯೂಸ್ ಗೆ ಸ್ವಲ್ಪ ಚಾಟ್ ಮಸಾಲಾ, ಕಾಳುಮೆಣಸಿನ ಪುಡಿ ಹಾಕಿಕೊಂಡು ಕುಡಿದ್ರೆ ಅದರ ಮಜಾನೇ ಬೇರೆ. ಕೇವಲ ಟೇಸ್ಟ್ ಗೆ ಮಾತ್ರವಲ್ಲ ಮೋಸಂಬಿ ಸೌಂದರ್ಯವರ್ಧಕವೂ ಹೌದು.
ಇದರಲ್ಲಿ ವಿಟಮಿನ್ ಸಿ ಹೇರಳವಾಗಿ ಇರುವುದರಿಂದ ನಮ್ಮ ನಿತ್ಯದ ಡಯಟ್ ಗೆ ಹೇಳಿ ಮಾಡಿಸಿದಂತಿದೆ.
ಒತ್ತಡ ಮತ್ತು ಮಾಲಿನ್ಯದಿಂದ ನಿಮ್ಮ ದೇಹದಲ್ಲಿ ಅಪಾಯಕಾರಿ ಟಾಕ್ಸಿನ್ ಗಳು ಸೇರಿಕೊಂಡಿರುತ್ತವೆ. ಅವನ್ನೆಲ್ಲ ಹೊರಹಾಕುವಲ್ಲಿ ಮೋಸಂಬಿ ಜ್ಯೂಸ್ ಸಹಕಾರಿ.
ಮೋಸಂಬಿಯಲ್ಲಿ ಸೋಂಕು ಪ್ರತಿರೋಧಕ ಅಂಶಗಳಿರೋದ್ರಿಂದ ನಿಮ್ಮ ಇಮ್ಯುನಿಟಿ ವ್ಯವಸ್ಥೆ ಸುಧಾರಿಸುತ್ತೆ. ಅಜೀರ್ಣದ ತೊಂದರೆಯಿದ್ದವರು ಮೋಸಂಬಿ ಹಣ್ಣಿನ ಜ್ಯೂಸ್ ಕುಡಿಯೋದು ಉತ್ತಮ. ಎಷ್ಟೋ ಬಾರಿ ಅಜೀರ್ಣದಿಂದಲೂ ನಿಮ್ಮ ಮುಖದ ಮೇಲೆ ಮೊಡವೆಗಳು ಏಳುತ್ತವೆ.
ಮೋಸಂಬಿಯಲ್ಲಿ ಫೈಬರ್ ಅಂಶ ಹೆಚ್ಚಾಗಿರುವುದರಿಂದ ಜೀರ್ಣಾಂಗ ವ್ಯವಸ್ಥೆಯನ್ನು ಅದು ಸುಧಾರಿಸುತ್ತದೆ. ಮೋಸಂಬಿಯಲ್ಲಿ ವಿಟಮಿನ್ಸ್ ಹಾಗೂ ಮಿನರಲ್ಸ್ ಹೇರಳವಾಗಿರೋದ್ರಿಂದ ನಿಮ್ಮ ಮುಖದ ಕಾಂತಿ ಹೆಚ್ಚುತ್ತದೆ. ಚರ್ಮ ಹೊಳಪಾಗುತ್ತವೆ. ಮುಖದ ಮೇಲಿನ ಕಲೆಗಳ ನಿವಾರಣೆಗೆ ಮೋಸಂಬಿ ಬೆಸ್ಟ್.
ಮೋಸಂಬಿ ರಸವನ್ನು ಮುಖಕ್ಕೆ ಹಚ್ಚಿಕೊಂಡು 15 ನಿಮಿಷ ಬಿಟ್ಟು ತೊಳೆದರೆ ಮುಖದ ಮೇಲಿನ ಕಲೆಗಳು ಮಾಯವಾಗುತ್ತವೆ. ದಿನನಿತ್ಯ ನೀವು ಮೋಸಂಬಿ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿಕೊಂಡ್ರೆ ನಿಮ್ಮ ಚರ್ಮ ಬೇಗ ಸುಕ್ಕಾಗುವುದಿಲ್ಲ.
ನಿಮ್ಮ ಮುಖದ ಮೇಲಿನ ಗುಳ್ಳೆಗಳು, ಮೊಡವೆ ಎಲ್ಲವೂ ನಿವಾರಣೆಯಾಗುತ್ತವೆ. ಕೂದಲಿನ ಆರೋಗ್ಯ, ಸೌಂದರ್ಯ ಕಾಪಾಡಿಕೊಳ್ಳಲು ಕೂಡ ಮೋಸಂಬಿ ಬೇಕೇಬೇಕು. ಮೋಸಂಬಿ ಸೇವನೆಯಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ, ತಲೆಗೂದಲು ಕವಲೊಡೆಯುವುದಿಲ್ಲ. ಮೊಡವೆ ಸಮಸ್ಯೆಯಿದ್ದವರು ಪ್ರತಿದಿನ ಒಂದು ಗ್ಲಾಸ್ ಮೋಸಂಬಿ ಜ್ಯೂಸ್ ಸೇವಿಸಿ, ಬದಲಾವಣೆಯನ್ನು ಕಾದು ನೋಡಿ.