Ad Widget .

ಮಂಗಳೂರು: ಮಾದಕವಸ್ತು ಸಾಗಾಟ ಮಾಡುತ್ತಿದ್ದ ಇಬ್ಬರು ಬಂಧನ

ಸಮಗ್ರ ನ್ಯೂಸ್: ಮಾದಕ ನಿದ್ರಾಜನಕ ವಸ್ತುವಾದ ಎಂ.ಡಿ.ಎಂ.ಎ. ಸಾಗಾಟ ಮಾಡುತ್ತಿದ್ದ ಪ್ರಕರಣವೊಂದರಲ್ಲಿ ಗುರುವಾರ ಬಂಟ್ವಾಳ ನಗರ ಠಾಣಾ ಪೊಲೀಸರು ಇಬ್ಬರನ್ನು ಬಿ.ಸಿ.ರೋಡ್ ರೈಲ್ವೆ ನಿಲ್ದಾಣದ ಬಳಿ ಗೂಡಿನಬಳಿಗೆ ಹೋಗುವ ರಸ್ತೆಯಲ್ಲಿ ಬಂಧಿಸಿದ್ದಾರೆ.

Ad Widget . Ad Widget .

ಬಿಕಸ್ಟಾ ಗ್ರಾಮದ ಬಾರೆಕಾಡು ನಿವಾಸಿ ಇರ್ಷಾದ್ (25) ಮತ್ತು ಕಾಸರಗೋಡು ಮಂಜೇಶ್ವರ ತಾಲೂಕಿನ ದೀಕ್ಷಿತ್ ಯಾನೆ ಅಪ್ಪೂಸ್ (19) ಎಂಬಿಬ್ಬರು ಬಂಧಿತರು. ಬಂಟ್ವಾಳ ನಗರ ಠಾಣಾಧಿಕಾರಿ ಅವಿನಾಶ್ ಅವರು ಸಿಬ್ಬಂದಿ ಜೊತೆ ಗಸ್ತಿನಲ್ಲಿದ್ದ ವೇಳೆ ಸಂಜೆ ಸುಮಾರು ಸಂಜೆ 5 ಗಂಟೆಯ ವೇಳೆಗೆ ಬಿ,ಮೂಡ ಗ್ರಾಮದ ಗೂಡಿನಬಳಿಗೆ ಹೋಗುವ ರಸ್ತೆಯಲ್ಲಿ ವಾಹನಗಳನ್ನು ತಪಾಸಣೆ ಮಾಡಿಕೊಂಡಿರುವಾಗ ನಾರಾಯಣಗುರು ವೃತ್ತದ ಕಡೆಯಿಂದ ಬಂದ ಆರೋಪಿಗಳಿಬ್ಬರು ಪ್ರಯಾಣಿಸುತ್ತಿದ್ದ ಆಟೋರಿಕ್ಷಾವನ್ನು ನಿಲ್ಲಿಸಲು ಸೂಚಿಸಿ ದಾಖಲಾತಿ ಕೇಳಿದಾಗ ಚಾಲಕನ ವರ್ತನೆಯಲ್ಲಿ ಅನುಮಾನ ಕಂಡು ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭ ಎಂಡಿಎಂಎ ನಿದ್ರಾಜನಕ ಸೊತ್ತನ್ನು ಸೇವಿಸಿರುವುದು ಗಮನಕ್ಕೆ ಬಂದಿದೆ.

Ad Widget . Ad Widget .

ಇರ್ಷಾದ್ ಬಳಿಯಿಂದ 4 ಗ್ರಾಮ್ ತೂಕ ಹಾಗೂ ದೀಕ್ಷಿತ್ ಬೆಳೆಯಿಂದ 5 ಗ್ರಾಮ್ ತೂಕದ ನಿದ್ರಾಜನಕ ಸೊತ್ತಾದ ಎಂಡಿಎಂಎ ಮಾತ್ರೆ ಇದ್ದು, ಸುಮಾರು 20 ಸಾವಿರ ಮೌಲ್ಯದ್ದಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಎಂಡಿಎಂಎ ಸೊತ್ತು ಹಾಗೂ ರಿಕ್ಷಾಸಹಿತ ಬಂಧಿಸಿ ಪ್ರಕರಣ ದಾಖಲಿಸಲಾಯಿತು.

Leave a Comment

Your email address will not be published. Required fields are marked *