ಕಾರ್ಕಳ: ಚಲಿಸುತ್ತಿದ್ದ ಸ್ಕೂಟರ್ ಬೆಂಕಿಗಾಹುತಿ

ಸಮಗ್ರ ನ್ಯೂಸ್: ಚಲಿಸುತ್ತಿದ್ದ ವೇಳೆ ದ್ವಿಚಕ್ರ ವಾಹನವೊಂದರ ಇಂಜಿನ್ ಇದ್ದಕ್ಕಿದ್ದಂತೆ ಆಫ್ ಆಗಿ, ಇಡೀ ಸ್ಕೂಟರ್ ಬೆಂಕಿಗಾಹುತಿಯಾದ ಘಟನೆ ಕಾರ್ಕಳ ತಾಲೂಕಿನ ಎಣ್ಣೆಹೊಳೆಯಲ್ಲಿ ನಡೆದಿದೆ.

Ad Widget ... ..

ಈ ವೇಳೆ ಸವಾರ ಸ್ಕೂಟರ್ ನಿಂದ ಇಳಿದು ಏನಾಗಿದೆ ಎಂದು ಪರಿಶೀಲಿಸುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ.

Ad Widget

ಕಾರ್ಕಳ ಮೂಲದವರಿಗೆ ಸೇರಿದ ಸ್ಕೂಟರ್ ಕ್ಷಣಾರ್ಧದಲ್ಲಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಬ್ಯಾಟರಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.

Leave a Comment

Your email address will not be published. Required fields are marked *