Ad Widget .

ಪ್ರತ್ಯೇಕ ಬೈಕ್ ಅಪಘಾತದಲ್ಲಿ ಮೂವರು ದುರ್ಮರಣ

ಸಮಗ್ರ ನ್ಯೂಸ್: ಪ್ರತ್ಯೇಕವಾಗಿ ಸಂಭವಿಸಿದ ಎರಡು ಅಪಘಾತಗಳಲ್ಲಿ ಒಬ್ಬ ಕಾಲೇಜು ವಿದ್ಯಾರ್ಥಿ ಸೇರಿದಂತೆ ಮೂವರು ದಾರುಣವಾಗಿ ಪ್ರಾಣ ಕಳೆದುಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ನಡೆದಿದೆ.

Ad Widget . Ad Widget .

ಸಾಗರ ತಾಲೂಕಿನ ಖೈರಾ ಸಮೀಪ ಬೈಕ್‌ ನಿಯಂತ್ರಣ ತಪ್ಪಿ ಉರುಳಿ ಬಿದ್ದು ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಸಾಗರದ ಪಾಲಿಟೆಕ್ನಿಕ್ ಕಾಲೇಜ್ ವಿದ್ಯಾರ್ಥಿ ಎಲ್ಡ್ರನ್ ಫರ್ನಾಂಡಿಸ್ (17 ) ಮೃತ ದುರ್ದೈವಿ. ಈತ ಆನಂದಪುರ ಸಮೀಪದ ಯಡೆಹಳ್ಳಿಯ ನಿವಾಸಿ. ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಘಟನೆ ನಡೆದಿದ್ದು, ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget . Ad Widget .

ಶಿವಮೊಗ್ಗದ ಸಾಗರ ತಾಲ್ಲೂಕಿನ ಹೊಸಂತೆ ಗ್ರಾಮದಲ್ಲಿ ಬೈಕ್‌ಗಳ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಮೃತಪಟ್ಟಿದ್ದಾರೆ. ಸಾಗರದ ಚನ್ನಾಪುರದ ಪ್ರಮೋದ್(23), ಶಿವಮೊಗ್ಗದ ಆಸಿಫ್ (21) ಮೃತಪಟ್ಟವರು. ಪ್ರಮೋದ್ ಅವರ ಅಜ್ಜಿ ದೇವಮ್ಮ(70) ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *