Ad Widget .

ಕೋವಿಡ್ ಹೊಸ ತಳಿ ಪತ್ತೆ ಹಿನ್ನೆಲೆ| ಆತಂಕ ಬೇಡ, ಕಾದು ನೋಡೋಣ ಎಂದ ತಜ್ಞರು|

ಸಮಗ್ರ ನ್ಯೂಸ್: ಭಾರತದಲ್ಲಿ ಕಾಣಿಸಿಕೊಂಡಿರುವ ಬಿಎಫ್. 7 ಮಾದರಿ ಸೋಂಕಿಗೂ ಚೀನಾದ ಕೋವಿಡ್ ಪರಿಸ್ಥಿತಿಗೂ ಯಾವುದೇ ಸಂಬಂಧವಿಲ್ಲ. ಅಲ್ಲಿನ ಪರಿಸ್ಥಿತಿಗೂ ಇಲ್ಲಿನ ಪರಿಸ್ಥಿತಿಗೂ ಭಿನ್ನವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಚೀನಾ, ಜಪಾನ್, ಕೊರಿಯಾ, ಅಮೆರಿಕ, ಬ್ರೆಜಿಲ್ ಸೇರಿದಂತೆ ಹಲವು ದೇಶಗಳಲ್ಲಿ ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆ ಬೆಂಗಳೂರಿನಲ್ಲೂ ಕೊರೊನಾ ಆತಂಕ ಹೆಚ್ಚಾಗಿದೆ.

Ad Widget . Ad Widget . Ad Widget .

ಓಮಿಕ್ರಾನ್ ಹೊಸ ರೂಪಾಂತರಿ ಮತ್ತೆ ಅಬ್ಬರಿಸಲು ಶುರುಮಾಡಿದೆ ಎಂಬ ಆತಂಕ ಹೆಚ್ಚಾಗಿದ್ದು ಎರಡು ವಾರಗಳ ಕಾದು ನೋಡುವ ತಂತ್ರಕ್ಕೆ ತಜ್ಞರು ಮುಂದಾಗಿದ್ದಾರೆ. ದೇಶದಲ್ಲಿ ಎರಡು ವಾರಗಳ ಬಳಿಕ ಕೊರೊನಾ ಆರ್ಭಟದ ಚಿತ್ರಣ ಸಿಗಲಿದೆ ಎಂದು ತಜ್ಞರು ತಿಳಿಸಿದ್ದಾರೆ. ‌

ರಾಜ್ಯದಲ್ಲಿ ಮತ್ತೆ ಕೊರೊನಾ ಆತಂಕ ಶುರುವಾದ ಹಿನ್ನೆಲೆ ಕೊರೊನಾ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ. ಚೀನಾ ಹಾಗೂ ಅಮೇರಿಕಾದಲ್ಲಿ ಸೋಂಕು ಗಣನೀಯ ಏರಿಕೆ ಕಾಣುತ್ತಿದೆ. ಹೀಗಾಗಿ ಕೇಂದ್ರ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು ಹೊಸ ರೂಪಾಂತರಿಗಳ ಪತ್ತೆಗೆ ರಾಜ್ಯ ಆರೋಗ್ಯ ಇಲಾಖೆಗಳಿಗೆ ಸೂಚನೆ ನೀಡಿದೆ. ಎಲ್ಲಾ ಪಾಸಿಟಿವ್ ಕೇಸ್ ಸಾಂಪಲ್ ಗಳನ್ನ ಜೀನೋಮ್ ಸೀಕ್ವೆನ್ಸಿಂಗ್ ಕಳಿಸುವಂತೆ ಸೂಚನೆ ನೀಡಿದ್ದು ಸೀಕ್ವೆನ್ಸಿಂಗ್ ಮಾಡಲು INSCOG ನ ಅನುಮತಿ ಪಡೆದ ಲ್ಯಾಬ್ ಗಳಿಗೆ ಕಳಿಸುವಂತೆ ಸೂಚನೆ ನೀಡಿದೆ.

ದೇಶದಲ್ಲಿ 5 ಪೋಲ್ಡ್ ಸೂತ್ರ ಪಾಲನೆ ಮಾಡೋ ಮೂಲಕ ಕೊವಿಡ್ ಆರ್ಭಟಕಕ್ಕೆ ಬ್ರೇಕ್ ಹಾಕಲು ಚಿಂತನೆ ನಡೆದಿದೆ. ಕಳೆದ ಸಭೆಯಲ್ಲಿ ರಾಜ್ಯ ಆರೋಗ್ಯ ಇಲಾಖೆಗೆ ಹೊಸ ರೂಪಾಂತರಿಗಳ ಬಗ್ಗೆ ಎಚ್ಚರಿಕೆ ನೀಡಿದ್ದು ಟೆಸ್ಟ್, ಟ್ರಾಕ್, ಟ್ರೀಟ್, ವ್ಯಾಕ್ಸಿನೇಷನ್ ಅನುಸರಣೆ ಮಾಡುವಂತೆ ಸೂಚನೆ ಕೊಟ್ಟಿದೆ. ಮತ್ತೆ ಕೊರೊನಾ ಏರಿಕೆ ಕಂಡ್ರೆ ಕೊರೊನಾ ಮಾರ್ಗಸೂಚಿಗಳ ಜಾರಿ ಅಸ್ತ್ರಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಸಲಹೆ ನೀಡಿದೆ.

Leave a Comment

Your email address will not be published. Required fields are marked *