Ad Widget .

ಸಪೋರ್ಟ್ ಗೆ ನಿಂತ ಸುದೀಪ್ ಗೆ ಥ್ಯಾಂಕ್ಸ್ ಹೇಳಿದ ದರ್ಶನ್| ಅಭಿಮಾನಿಗಳು ಫುಲ್ ಖುಷ್

ಸಮಗ್ರ ನ್ಯೂಸ್: ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಮುಂಬರುವ ಕ್ರಾಂತಿ ಚಿತ್ರದ ಹಾಡಿನ ಪ್ರೊಮೋಷನ್ ಗೆ ಬಳ್ಳಾರಿಯ ಹೊಸಪೇಟೆಗೆ ಹೋಗಿದ್ದ ದರ್ಶನ್ ಮೇಲೆ ಕಿಡಿಗೇಡಿಗಳು ಚಪ್ಪಲಿ ಎಸೆದ ಘಟನೆ ನಡೆದಿತ್ತು.

Ad Widget . Ad Widget .

ಈ ಘಟನೆಯನ್ನು ಖಂಡಿಸಿ ಈಗಾಗಲೇ ಕನ್ನಡ ಚಿತ್ರರಂಗದ ಕಲಾವಿದರು, ರಾಜಕೀಯ ನಾಯಕರು ದರ್ಶನ್ ಗೆ ಬೆಂಬಲ ಸೂಚಿಸಿದ್ದಾರೆ. ಹಿಂದೆ ಗೆಳೆಯರಾಗಿದ್ದು ಬಳಿಕ ಹಲವು ವೈಯಕ್ತಿಕ ಕಾರಣಗಳಿಗೆ ದೂರಾದ ಕಿಚ್ಚ ಸುದೀಪ್ ಹೊಸಪೇಟೆ ಘಟನೆಯನ್ನು ಬಲವಾಗಿ ಖಂಡಿಸಿ ಸುದೀರ್ಘ ಪತ್ರ ಬರೆದಿದ್ದರು. ವೈಷಮ್ಯವನ್ನು ಮರೆತು ಈ ಸಂದರ್ಭದಲ್ಲಿ ಕಿಚ್ಚ ಒಳ್ಳೆಯ ಮಾತುಗಳನ್ನಾಡಿದ್ದು ಹಲವರಿಗೆ ಖುಷಿ ಕೊಟ್ಟಿತು. ಅಷ್ಟೇ ಅಲ್ಲ ದರ್ಶನ್ ಮತ್ತು ಸುದೀಪ್ ಒಂದಾಗಬೇಕು, ಚಂದನವನ ಬೆಳಗಬೇಕು ಎಂದು ಆಶಿಸಿದರು.

Ad Widget . Ad Widget .

ಒಂದು ಕಾಲದ ಗೆಳೆಯ ಈ ಕಷ್ಟದ ಸಂದರ್ಭದಲ್ಲಿ ತನ್ನ ಪರವಾಗಿ ನಿಂತಿದ್ದಕ್ಕೆ, ನಾಲ್ಕು ಒಳ್ಳೆಯ ಮಾತುಗಳನ್ನಾಡಿದ್ದಕ್ಕೆ ದರ್ಶನ್ ಧನ್ಯವಾದಗಳನ್ನು ಹೇಳಿದ್ದಾರೆ. ಇದು ಕಿಚ್ಚ ಮತ್ತು ದಚ್ಚು ಫ್ಯಾನ್ಸ್ ಗಳಿಗೆ ಬಹಳ ಖುಷಿ ಕೊಟ್ಟಿದೆ.

ಚಪ್ಪಲಿ ಎಸೆತ ಘಟನೆಯನ್ನು ಖಂಡಿಸಿ ಚಿತ್ರರಂಗದ ಬಹುತೇಕ ಕಲಾವಿದರು, ಗಣ್ಯರು ದಾಸ ದರ್ಶನ್ ಗೆ ಬೆಂಬಲ ಸೂಚಿಸಿದ್ದು ಅವರಿಗೆಲ್ಲರಿಗೂ ಧನ್ಯವಾದ ಕೃತಜ್ಞತೆ ಹೇಳಿದ್ದಾರೆ.

Leave a Comment

Your email address will not be published. Required fields are marked *