Ad Widget .

ಶಾಸಕನಿಗೆ ಗೆಟ್ ಲಾಸ್ಟ್ ಎಂದಿದ್ದಕ್ಕೆ ಸದನದ ಅರ್ಧದಿನ ಬಲಿ| ಇಂದು ಮತ್ತಷ್ಟು ವಿಚಾರ ಚರ್ಚೆಗೆ| ಬೆಳಗಾವಿಯಿಂದ ಚಳಿಗಾಲದ ಅಧಿವೇಶನ ನೇರಪ್ರಸಾರ

ಸಮಗ್ರ ನ್ಯೂಸ್: ಶಾಸಕನಿಗೆ ಗದರಿದ ಆಡಳಿತಾರೂಢ ಪಕ್ಷದ ಸಚಿವರು ಗದರಿದ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಸದನದ ಬಾವಿಗಿಳಿದು ತೀವ್ರ ಪ್ರತಿಭಟನೆ ನಡೆಸಿದರು. ಈ ಧರಣಿ ಎರಡು ಬಾರಿ ಸದನ ಮುಂದೂಡಿಕೆಯಾಗುವಂತೆ ಮಾಡಿ ಸರಿ ಸುಮಾರು ಅರ್ಧ ದಿನದ ಕಲಾಪವನ್ನು ಬಲಿ ಪಡೆದುಕೊಂಡ ಘಟನೆ ಬುಧವಾರ ನಡೆಯಿತು.

Ad Widget . Ad Widget .

ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಸಿದ್ದು ಸವದಿ ಪ್ರಶ್ನೆಗೆ ಶ್ರಾರಾಮುಲು ನೀಡಿದ ಉತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿ ಪ್ರತಿಪಕ್ಷಗಳ ಸದಸ್ಯರು ಬಾವಿಗಿಳಿದು ಪ್ರತಿಭಟಿಸಿದರು. ಈ ವೇಳೆ ಪ್ರತ್ಯೇಕ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿದ ಸ್ಪೀಕರ್ ಭರವಸೆಗೆ ಓಗೊಟ್ಟು ಉಳಿದ ಎಳ್ಲಾ ಸದಸ್ಯರು ತಮ್ಮ ಸ್ಥಾನಗಳಿಗೆ ತೆರಳಿದರೂ ಕಾಂಗ್ರೆಸ್ ಸದಸ್ಯ ರಂಗನಾಥ್ ಮಾತ್ರ ತೆರಳಲಿಲ್ಲ.

Ad Widget . Ad Widget .

ಇದರಿಂದ ಕೆರಳಿದ ಸಚಿವ ಗೋವಿಂದ ಕಾರಜೋಳ, ಎಲ್ಲರೂ ಹೋಗಿದ್ರೆ ನಿಂದೇನು ಸ್ಪೆಷಲ್, ಹೊರಗ್ ನಡಿ ನೀ ಮೊದಲು, ಏಯ್, ನಡೀ ಹೊರಗೆ ಎಂದು ಏರು ಧ್ವನಿಯಲ್ಲಿ ಏಕ ವಚನದಲ್ಲೇ ಗದರಿದರು. ಇದಕ್ಕೆ ಪ್ರತ್ಯುತ್ತ ನೀಡಲು ಮುಂದಾದ ರಂಗನಾಥ್ ವಿರುದ್ಧ ಅಕ್ರೋಶಭರಿತ ಮುಖ ಭಾವದೊಂದಿಗೆ ಮುಗಿಬಿದ್ದ ಕಾರಜೋಳ, ಮುರ್ಖನಂತೆ ಮಾತನಾಡ್ತಿದಿಯ, ನಾಲಿಗೆ ಬಿಗಿ ಹಿಡಿದು ಮಾತನಾಡು.ಹುಡುಗಾಟಿಕೆ ಮಾಡುತ್ತಿದ್ದೀಯಾ. ಮೊದಲು ನಿನ್ನ ಸದನದಿಂದ ಹೊರಗೆ ಹಾಕಬೇಕು ಎಂದು ಹರಿಹಾಯ್ದರು.

ಇದು ಉಳಿದ ಕಾಂಗ್ರೆಸ್ ಸದಸ್ಯರನ್ನು ಕ್ರುದ್ಧಗೊಳಿಸಿತು. ಹೀಗಾಗಿ ಮತ್ತೆ ಎಲ್ಲರೂ ಸದನದ ಬಾವಿಗಿಳಿದು, ಸದಸ್ಯರೊಬ್ಬರಿಗೆ ಅಗೌರವ ಸೂಚಿಸಿದ ಕಾರಜೋಳ ಅವರು ಕ್ಷಮೆಯಾಚಿಸಬೇಕು ಎಂದು ಪಟ್ಟು ಹಿಡಿದ ಪ್ರಸಂಗ ನಡೆಯಿತು.

ನಾಲ್ಕನೇ ದಿನದ ಕಲಾಪದ ನೇರಪ್ರಸಾರಕ್ಕಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ: ಕೃಪೆ- ಡಿಡಿ ಚಂದನ

Leave a Comment

Your email address will not be published. Required fields are marked *