Ad Widget .

“ಬಸ್ ಇದೆ, ರಸ್ತೆ ಸರಿ‌ ಇಲ್ಲ” ಎಂದು ರೈಲು ಬಿಟ್ಟ ಸಾರಿಗೆ ಸಚಿವ ಶ್ರೀರಾಮುಲು| ವಿಧಾನ ಸಭೆಯಲ್ಲಿ ಸಾರಿಗೆ ಸಮಸ್ಯೆ ಕುರಿತು ವಿಪಕ್ಷಗಳಿಂದ ಪ್ರತಿಭಟನೆ

ಸಮಗ್ರ ನ್ಯೂಸ್: ಇಂದು ವಿಧಾನಸಭೆಯಲ್ಲಿ ಗ್ರಾಮೀಣ ಭಾಗಗಳಲ್ಲಿ ಸರಿಯಾಗಿ ಸಾರಿಗೆ ಬಸ್ ಇಲ್ಲದೇ, ವಿದ್ಯಾರ್ಥಿಗಳು ಸೇರಿದಂತೆ ಜನಸಾಮಾನ್ಯರು ಸಮಸ್ಯೆಗೆ ಸಿಲುಕುವಂತೆ ಆಗಿದೆ. ಕೂಡಲೇ ಸಾರಿಗೆ ಬಸ್ ಸಮಸ್ಯೆಯನ್ನು ಸರಿಪಡಿಸಬೇಕು ಎಂಬುದಾಗಿ ವಿಪಕ್ಷದ ಸದಸ್ಯರು ಸೇರಿದಂತೆ ಹಲವು ಸದಸ್ಯರು ಒತ್ತಾಯಿಸಿದರು.

Ad Widget . Ad Widget .

ಇದಕ್ಕೆ ಸಾರಿಗೆ ಸಚಿವ ಶ್ರೀರಾಮುಲು, ಬಸ್ ಗಳಿದ್ದರೂ ಕೆಲವೆಡೆ ಬಸ್ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಕೆಲವು ಮಾರ್ಗಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದರು. ಸಚಿವರ ಉತ್ತರದ ಬಳಿಕವೂ ತೃಪ್ತಿಗೊಳ್ಳದ ಸದಸ್ಯರು ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸಿದರು. ಹೀಗಾಗಿ ಕೆಲ ಕಾಲ ಸದನವನ್ನು ಮುಂದೂಡಿಕೆ ಬಳಿಕ, ಮತ್ತೆ ಆರಂಭಿಸಿದಂತ ಘಟನೆಯೂ ನಡೆಯಿತು.

Ad Widget . Ad Widget .

ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು, ಬಹಳಷ್ಟು ಮಂದಿ ಸದಸ್ಯರು, ಗ್ರಾಮಾಂತರ ಪ್ರದೇಶದಲ್ಲಿ ಸಾರಿಗೆ ಬಸ್ ಸಮಸ್ಯೆ ಆಗುತ್ತಿದೆ. ಹೊಸ ಬಸ್ ಗಳನ್ನು ಒದಗಿಸಬೇಕು ಎಂದು ಕೇಳುತ್ತಿದ್ದಾರೆ. ಕೋವಿಡ್ ಮೊದಲು ಎಲ್ಲಾ ಪ್ರದೇಶಗಳಲ್ಲಿ ಬಸ್ ವ್ಯವಸ್ಥೆ ಇತ್ತು. ಆ ಬಳಿಕ ಕಡಿಮೆಯಾಗಿದೆ. ಕೆಲವೊಂದು ಕಡೆಗಳಲ್ಲಿ ರಸ್ತೆ ಸರಿಯಿಲ್ಲ. ಕೆಲವೆಡೆ ಬಸ್ ಹೋಗುತ್ತಿಲ್ಲ. ಆ ಎಲ್ಲಾ ಮಾಹಿತಿಯನ್ನು ಪಡೆದು, ಬಸ್ ವ್ಯವಸ್ಥೆ ಮಾಡಲಾಗುತ್ತದೆ ಎಂಬುದಾಗಿ ಸ್ಪಷ್ಟ ಪಡಿಸಿದರು.

ಇದಕ್ಕೆ ತೃಪ್ತಿಯಾಗದ ಶಾಸಕ ಸಿದ್ದು ಸವದಿ ಅವರು, ಪ್ರಶ್ನೋತ್ತರದ ವೇಳೆಯಲ್ಲಿ ಹೀಗೆ ಬರುವುದು ಸರಿಯಲ್ಲ ಎಂಬುದಾಗಿ ಸ್ಪೀಕರ್ ಕುಮಾರ್ ಬಂಗಾರಪ್ಪ ಹೇಳಿದರೂ, ಸದನದ ಸದಸ್ಯರು ನಿಲ್ಲಿಸಲಿಲ್ಲ. ಹೀಗಾಗಿ ಸ್ಪೀಕರ್ ಕೆಲಕಾಲ ವಿಧಾನಸಭೆಯ ಕಲಾಪವನ್ನು ಮುಂದೂಡಿದ ಪ್ರಸಂಗ ನಡೆಯಿತು.

Leave a Comment

Your email address will not be published. Required fields are marked *