Ad Widget .

ತ್ರಿಬಲ್ ರೈಡಿಂಗ್; 103 ವಾಹನಗಳು ಪೊಲೀಸ್ ವಶಕ್ಕೆ

ಸಮಗ್ರ ನ್ಯೂಸ್: ತ್ರಿಬಲ್ ರೈಡಿಂಗ್ ವಿರುದ್ಧ ಮೈಸೂರು ನಗರ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ 103 ವಾಹನಗಳ ವಶಪಡಿಸಿಕೊಂಡು, 760 ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ.

Ad Widget . Ad Widget .

ದ್ವಿಚಕ್ರ ವಾಹನಗಳಲ್ಲಿ ತ್ರಿಬಲ್ ರೈಡಿಂಗ್ ಮಾಡುವವರ ವಿರುದ್ಧ ಮತ್ತು ರಸ್ತೆ ಅಪಘಾತಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ವಿಶೇಷ ಕಾರ್ಯಾಚರಣೆಯನ್ನು ಮೈಸೂರು ನಗರ ಸಂಚಾರ ಪೊಲೀಸರು ಕೈಗೊಂಡಿದ್ದಾರೆ. ಡಿಸೆಂಬರ್​ 5ರಿಂದ 19ರವರೆಗೆ ನಡೆದ ಈ ಕಾರ್ಯಾಚರಣೆಯಲ್ಲಿ 103 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

Ad Widget . Ad Widget .

ಈ ವಾಹನಗಳ ಬಗ್ಗೆ ಪರಿಶೀಲಿಸಲಾಗಿ 760 ಪ್ರಕರಣಗಳು ಇದ್ದು, ಅವಶ್ಯಕ ದಾಖಲಾತಿಗಳನ್ನು ಪರಿಶೀಲಿಸಿ, ದಂಡ ಪಾವತಿಸಿದ ನಂತರ ಸೂಕ್ತ ತಿಳುವಳಿಕೆ ನೀಡಿ ಕಳುಹಿಸಲಾಗುತ್ತಿದೆ.

ತ್ರಿಬಲ್ ರೈಡಿಂಗ್ ವಿರುದ್ಧ ಈ ವಿಶೇಷ ಕಾರ್ಯಾಚರಣೆಯು ಮುಂದುವರೆಯುವುದಲ್ಲದೇ, ಇತರೆ ಸಂಚಾರ ನಿಯಮಗಳ ಉಲ್ಲಂಘನೆಗಳ ವಿರುದ್ಧವೂ ಸಹ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದರೊಂದಿಗೆ ಸಂಬಂಧಪಟ್ಟ ಅವಶ್ಯಕ ದಾಖಲಾತಿಗಳನ್ನು ಇಟ್ಟುಕೊಳ್ಳುವಂತೆ ನಗರ ಪೊಲೀಸ್ ಆಯುಕ್ತ ಬಿ. ರಮೇಶ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Leave a Comment

Your email address will not be published. Required fields are marked *