Ad Widget .

ಪಿಕ್ಕಾಸಿಯಿಂದ ಹೊಡೆದು ವಿದ್ಯಾರ್ಥಿಯ ಕೊಲೆಗೈದ ಅತಿಥಿ ಶಿಕ್ಷಕ| ತರಗತಿ ವೇಳೆಯಲ್ಲೇ ನಡೆಯಿತು ಬರ್ಬರ ಹತ್ಯೆ

ಸಮಗ್ರ ನ್ಯೂಸ್; ಅತಿಥಿ ಶಿಕ್ಷನೊಬ್ಬ 4ನೇ ತರಗತಿ ವಿದ್ಯಾರ್ಥಿಯನ್ನು ಶಾಲಾ ಆವರಣದಲ್ಲಿಯೇ ಹೊಡೆದು ಕೊಲೆ ಮಾಡಿರುವ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ ಗ್ರಾಮದಲ್ಲಿ ನಡೆದಿದೆ. ಭರತ್(10) ಮೃತ ಬಾಲಕ ಎಂದು ಗುರುತಿಸಲಾಗಿದೆ.

Ad Widget . Ad Widget .

ಅತಿಥಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಮುತ್ತಪ್ಪ ಹಡಗಲಿ ಎಂಬಾತ ವಿದ್ಯಾರ್ಥಿ ಮೇಲೆ ಪಿಕಾಸಿಯಿಂದ ಹಲ್ಲೆ ಮಾಡಿದ್ದಾಗಿ ಹೇಳಲಾಗಿದೆ.

Ad Widget . Ad Widget .

ಅತಿಥಿ ಶಿಕ್ಷಕಿ ಗೀತಾ ಬಾರಕೇರಿ ಅವರ ಮೇಲೂ ಮನಬಂದಂತೆ ಹಲ್ಲೆ ಮಾಡಿದ್ದಾನೆ. ತಲೆಗೆ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವಗೊಂಡ ವಿದ್ಯಾರ್ಥಿ ಮೃತಪಟ್ಟಿದ್ದಾನೆ.

ಹಲ್ಲೆ ಮಾಡುವುದನ್ನು ಬಿಡಿಸಲು ಹೋದ ಸರ್ಕಾರಿ ಶಾಲೆಯ ಸಹ ಶಿಕ್ಷಕನ ಮೇಲೂ ಆರೋಪಿ ಶಿಕ್ಷಕ ಹಲ್ಲೆ ಮಾಡಿದ್ದಾನೆ. ಭಯಭೀತರಾಗಿದ್ದ ಮಕ್ಕಳನ್ನು ಶಿಕ್ಷಕರು ಶಾಲೆಯಿಂದ ಹೊರಗೆ ಕಳುಹಿಸಿ ಗ್ರಾಮಸ್ಥರನ್ನು ಸಹಾಯಕ್ಕೆ ಕರೆದಿದ್ದಾರೆ.

ಗ್ರಾಮಸ್ಥರು ಬಂದು ಅತಿಥಿ ಶಿಕ್ಷಕನ ಹುಚ್ಚಾಟ ನಿಯಂತ್ರಣ ಮಾಡಿದ್ದಾರೆ. ಗಾಯಾಳು ಬಾಲಕ ಮತ್ತು ಅತಿಥಿ ಶಿಕ್ಷಕಿಯರನ್ನು ಆಸ್ಪತ್ರೆಗೆ ಕಳಿಸಲಾಯಿತು. ಆದರೆ ಬಾಲಕ ಮೃತಪಟ್ಟಿದ್ದಾನೆ.

Leave a Comment

Your email address will not be published. Required fields are marked *