Ad Widget .

ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸ್ ಪೋರ್ಸ್ ನಲ್ಲಿ ಉದ್ಯೋಗಾವಕಾಶ| ಡಿ.22 ಅರ್ಜಿ‌ ಸಲ್ಲಿಕೆಗೆ ಕೊನೆದಿನ

ಸಮಗ್ರ ನ್ಯೂಸ್: ಇಂಡೋ- ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ (ITBP) ಗ್ರೂಪ್ C ಯಲ್ಲಿ ಕಾನ್​ಸ್ಟೇಬಲ್ (ಟ್ರೇಡ್ಸ್‌ಮ್ಯಾನ್) ಹುದ್ದೆಗಳಿಗೆ ನೇಮಕಾತಿಗಾಗಿ ಆನ್‌ಲೈನ್​ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಡಿಸೆಂಬರ್ 22 ರೊಳಗೆ ಅಧಿಕೃತ ವೆಬ್‌ಸೈಟ್‌ ಮೂಲಕ ಅರ್ಜಿ ಸಲ್ಲಿಸಬಹುದು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಹುದ್ದೆಗಳ ವಿವರಗಳು:
ಒಟ್ಟು ಹುದ್ದೆಗಳ ಸಂಖ್ಯೆ: 287
ಕಾನ್ಸ್‌ಟೇಬಲ್ ಟ್ರೇಡ್ಸ್‌ಮನ್ (ಪುರುಷ)- 246 ಹುದ್ದೆಗಳು
ಕಾನ್ಸ್‌ಟೇಬಲ್ ಟ್ರೇಡ್ಸ್‌ಮನ್ (ಮಹಿಳೆ)- 41 ಹುದ್ದೆಗಳು
ವಿದ್ಯಾರ್ಹತೆ: ಕಾನ್‌ಸ್ಟ್ಟೇಬಲ್ (ಟೈಲರ್, ಮಾಲಿ ಮತ್ತು ಚಮ್ಮಾರ) -10ನೇ ತರಗತಿ ಪಾಸ್ ಆಗಿರಬೇಕು. ಹಾಗೆಯೇ ಸಂಬಂಧಿತ ಕ್ಷೇತ್ರದಲ್ಲಿ ಎರಡು ವರ್ಷಗಳ ಅನುಭವ ಅಥವಾ ಸಂಬಂಧಿತ ವಿಷಯದಲ್ಲಿ ಐಟಿಐ ಪ್ರಮಾಣಪತ್ರ ಹೊಂದಿರಬೇಕು. ಕಾನ್‌ಸ್ಟೇಬಲ್ (ಸಫಾಯಿ ಕರಂಚಾರಿ, ಧೋಬಿ, ಕ್ಷೌರಿಕ)- 10ನೇ ತರಗತಿಯಲ್ಲಿ ಉತ್ತೀರ್ಣರಾಗಿರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

Ad Widget . Ad Widget . Ad Widget .

ವಯೋಮಿತಿ: ಈ ಹುದ್ದೆಗಳಿಗೆ 18 ರಿಂದ 23 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಹಾಗೆಯೇ ಕೆಲ ಹುದ್ದೆಗಳಿಗೆ 25 ವರ್ಷದವರೆಗೆ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.

ಆಯ್ಕೆ ಪ್ರಕ್ರಿಯೆ: ಈ ಹುದ್ದೆಗಳಿಗೆ PET / PST, ಲಿಖಿತ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ವೇತನ:
ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ 21 ಸಾವಿರದಿಂದ 69,100 ರವರೆಗೆ ವೇತನ ನಿಗದಿಪಡಿಸಲಾಗುತ್ತದೆ.

ಅರ್ಜಿ ಶುಲ್ಕ:
UR / OBC / EWS ವರ್ಗಕ್ಕೆ ಸೇರಿದ ಪುರುಷ ಅಭ್ಯರ್ಥಿಗಳು ರೂ. 100 ಶುಲ್ಕವನ್ನು ಪಾವತಿಸಬೇಕಾಗುತ್ತದೆ. SC/ST/ಮಹಿಳೆಯರು ಮತ್ತು ಮಾಜಿ ಸೈನಿಕರಿಗೆ ಸೇರಿದ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಡಿಸೆಂಬರ್ 22, 2022

ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ಸೈಟ್itbpolice.nic.inಗೆ ಭೇಟಿ ನೀಡಿ.
‘new user notification’ ಗೆ ಹೋಗಿ ಮತ್ತು ಪೋರ್ಟಲ್‌ನಲ್ಲಿ ನೋಂದಾಯಿಸಿ.
Credentials ಲಾಗಿನ್ ಮಾಡಿ ಮತ್ತು ಪೋಸ್ಟ್‌ಗೆ ಅರ್ಜಿ ಸಲ್ಲಿಸಿ.
ಅರ್ಜಿಯನ್ನು ಭರ್ತಿ ಮಾಡಿ, ದಾಖಲೆಗಳನ್ನು ಅಪ್‌ಲೋಡ್ ಮಾಡಿ, ಶುಲ್ಕವನ್ನು ಪಾವತಿಸಿ ಮತ್ತು ಸಲ್ಲಿಸಿ. ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಪ್ರಿಂಟ್‌ಔಟ್ ತೆಗೆದುಕೊಳ್ಳಿ.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಸೂಚನೆ ಪರಿಶೀಲಿಸಲು ಅಧಿಕೃತ ಜಾಲತಾಣಕ್ಕೆ ಲಾಗಿನ್ ಆಗಿ.

Leave a Comment

Your email address will not be published. Required fields are marked *