Ad Widget .

ಕರ್ನಾಟಕ ವಿಧಾನಮಂಡಲ ಅಧಿವೇಶನ| ನಿಲುವಳಿ ಸೂಚನೆಗೆ ಮುಂದಾದ ಕಾಂಗ್ರೆಸ್| ಬೆಳಗಾವಿಯಿಂದ ನೇರಪ್ರಸಾರ…

ಸಮಗ್ರ ನ್ಯೂಸ್: ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಕರ್ನಾಟಕ ವಿಧಾನ ಮಂಡಲದ ಅಧಿವೇಶನ ಎರಡನೇ ದಿನಕ್ಕೆ ಕಾಲಿಟ್ಟಿದೆ. ಇಂದು ಸಾಕಷ್ಟು ವಿಷಯಗಳು ಚರ್ಚೆಗೆ ಬರಲಿದ್ದು ವಿಪಕ್ಷ ಕಾಂಗ್ರೆಸ್ ನಿಲುವಳಿ ಸೂಚನೆಯ ಮಂಡನೆಗೆ ಸಿದ್ದತೆ ನಡೆಸಿದೆ.

Ad Widget . Ad Widget .

2022ನೇ ಸಾಲಿನ ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳು (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಧೀಕ ಸೇವೆಗಳಲ್ಲಿನ ನೇಮಕಾತಿ ಅಥವ ಹುದ್ದೆಗಳಲ್ಲಿ ಮೀಸಲಾತಿ) ವಿಧೇಯಕವನ್ನು ಮಂಡಿಸಲು ಸರ್ಕಾರ ನಿರ್ಧಾರ ಮಾಡಿದ್ದು ಸಿಎಂ ಬಸವರಾಜ್ ಬೊಮ್ಮಾಯಿ ಇಂದು ವಿಧೇಯಕ ಮಂಡನೆ ಮಾಡಲಿದ್ದಾರೆ.

Ad Widget . Ad Widget .

ಮೀಸಲಾತಿ ವಿಚಾರವಾಗಿ ಸರ್ಕಾರ ಸುಳ್ಳು ಹೇಳುತ್ತಿದೆ, ಚುನಾವಣೆಯಲ್ಲಿ ಲಾಭ ಪಡೆಯಲು ಹುನ್ನಾರ ನಡೆಸಿದೆ. ಮೀಸಲಾತಿ ನೀಡುವುದೆ ಆದ್ರೆ ಕೇಂದ್ರದ 9 ಶೆಡ್ಯೂಲ್ ನಲ್ಲಿ ಸೇರಿಸಲಿ. ಮೀಸಲಾತಿ ವಿಚಾರವಾಗಿ ಕೇಂದ್ರ ಸರ್ಕಾರದಿಂದ ಉತ್ತರ ಕೊಡಿಸಲಿ ಎಂದು ಆಗ್ರಹಿಸಿದೆ. ಇದೇ ವಿಚಾರ ಉಭಯ ಸದನದಲ್ಲಿ ಪಟ್ಟು ಹಿಡಿಯಲು ಕಾಂಗ್ರೆಸ್ ನಿರ್ಧಾರ ಮಾಡಿದೆ. ಈ ಮೂಲಕ ಮೀಸಲಾತಿ ಅಸ್ತ್ರ ಬಳಸಿ ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ರಣತಂತ್ರ ರೂಪಿಸಿದೆ.

ಸದನದ ಚರ್ಚೆಗಳ ನೇರ ಪ್ರಸಾರ ವೀಕ್ಷಣೆಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ. ವೀಡಿಯೋ ಕೃಪೆ: ಡಿಡಿ‌ಚಂದನ

Leave a Comment

Your email address will not be published. Required fields are marked *