Ad Widget .

ಸುಳ್ಯ:ಮತ್ತೆ ಅಕ್ರಮ ಮರಳು ಅಡ್ಡೆಗಳ ಮೇಲೆ ದಿಢೀರ್ ದಾಳಿ| ಸುಮಾರು ನೂರಕ್ಕೂ ಹೆಚ್ಚು ಅನಾಥ ಮರಳು ಲೋಡ್ ಗಳ ವಶ !

ಸಮಗ್ರ ನ್ಯೂಸ್ : ಚುನಾವಣೆ ಸಮೀಪಿಸುತ್ತಿದ್ದಂತೆ ಒಂದಿಲ್ಲಾ ಒಂದು ವಿಚಾರಗಳು ಸುಳ್ಯ ತಾಲೂಕಿನಲ್ಲಿ ಬಹಳ ಸದ್ದು ಮಾಡುತ್ತಿದ್ದು ಇದೀಗ ಒಂದು ವಾರಗಳಿಂದ ನಿರಂತರವಾಗಿ ಅಕ್ರಮಗಳ ವಿರುದ್ದ ಸಮರ ಸಾರಿರುವ ಅಧಿಕಾರಿಗಳು ನಿನ್ನೆ ಧೀಡೀರ್ ಆಗಿ ಮತ್ತೆ ಅಕ್ರಮವಾಗಿ ನೂರು ಲೋಡ್ ಮರಳುಗಳನ್ನು ವಶಪಡಿಸಿಕೊಂಡ ಬಗ್ಗೆ ವರದಿಯಾಗಿದೆ.

Ad Widget . Ad Widget .

ಕೆಲ ದಿನಗಳ ಹಿಂದೆ ಒಬ್ಬ ರಾಜಕೀಯ ನಾಯಕರ ಲಾರಿ ಮತ್ತು ಗಣಿಗಾರಿಕೆ ಪ್ರದೇಶಗಳಿಗೆ ದಾಳಿ ನಡೆಸಿ ಸುಮಾರು ಎರಡು ಲಕ್ಷಗಳಷ್ಟು ಬೃಹತ್ ಮೊತ್ತವನ್ನು ಗಣಿ ಇಲಾಖೆ ಪಾವತಿಸಲು ಆದೇಶ ನೀಡಿ ಅವರು ಪಾವತಿಸಿರುವ ವಿಚಾರ ಇದೀಗ ಎಲ್ಲೆಡೆ ಹಬ್ಬುತ್ತಿದ್ದು ಇದೀಗ ಇದಕ್ಕೆಲ್ಲಾ ಉತ್ತರವಾಗಿ ಸುಳ್ಯದ ನಾನಾ ಕಡೆಗಳಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಹಿರಿಯ ಅಧಿಕಾರಿಗಳು ಕೊಡೆ ಹಿಡಿಯುವಾಗ ಕಿರಿಯ ನಿಷ್ಠಾವಂತ ಅಧಿಕಾರಿಗಳು ತಮ್ಮ ಕೆಲಸಗಳನ್ನು ಮಾಡುವ ಸಂದರ್ಭದಲ್ಲಿ ಭಯ ಪಡಿಸುವ ಕೆಲಸಗಳು ಕೂಡ ನಡೆಯುತ್ತಿರುವುದಾಗಿ ಹೇಳಲಾಗಿದೆ. ತಾಲೂಕಿನ ಎಲ್ಲಾ ಕಡೆಗಳಲ್ಲಿ ಇದೀಗ ಕಿರಿಯ ಅಧಿಕಾರಿಗಳ ಕೆಲಸಗಳು ಪ್ರಶಂಸೆಗೆ ಪಾತ್ರವಾಗಿದ್ದರೆ ಕಿರಿಯ ಅಧಿಕಾರಿಗಳ ವಿರುದ್ಧ ಹಿರಿಯ ಅಧಿಕಾರಿಗಳು ಈ ಅಕ್ರಮಗಳಿಗೆ ಸಪೋರ್ಟ್ ಮಾಡುತ್ತಿರುವ ಬಗ್ಗೆ ಗುಸುಗುಸು ಸುದ್ದಿಯಾಗುತ್ತಿದೆ.

Ad Widget . Ad Widget .

ಅಜ್ಜಾವರ ಗ್ರಾಮದ ಅಡ್ಪಂಗಾಯ, ಮೇನಾಲ ಮತ್ತು ಇತರ ಕಡೆಗಳಲ್ಲಿ ಇರುವ ಮರಳು ದಿಬ್ಬಗಳು ಮತ್ತು ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ಮಾಡಿದ ಸ್ಥಳಗಳೀಗೆ ಗಣಿ ಇಲಾಖೆಯ ಅಧಿಕಾರಿಗಳು ಬರಲಿದ್ದು ಎಲ್ಲಾ ಅಕ್ರಮ ಮರಳುಗಳನ್ನು ವಶಪಡಿಸಿ ಯಾರ ಹೆಸರಲ್ಲಿ ಮತ್ತು ಇದೀಗ ಅವುಗಳು ಯಾರದ್ದು ಎಂಬುವುದನ್ನು ಅಧಿಕಾರಿಗಳು ಬಯಲಿಗೆಳೆಯಲಿದ್ದಾರೆ ಎಂದು ಕಾದು ನೋಡಬೇಕಿದೆ . ಇತ್ತ ರಾಜಕೀಯ ಒತ್ತಡಗಳು ಇತ್ತಂಡಗಳಿಂದ ಬರುತ್ತಿದ್ದು ಇದೀಗ ಹಿರಿಯ ಅಧಿಕಾರಿಗಳು ಯಾವ ರೀತಿಯಲ್ಲಿ ಕ್ರಮ ಜರುಗಿಸುವರು ಎಂದು ಕಾದುನೋಡಬೇಕಿದೆ.

Leave a Comment

Your email address will not be published. Required fields are marked *