Ad Widget .

ನಾಲ್ವರನ್ನು ಮದ್ವೆಯಾಗಿ ಇಬ್ಬರೊಟ್ಟಿಗೆ ಎಂಗೇಜ್ ಆಗಿದ್ದ ಚಪಲ ಚೆನ್ನಿಗರಾಯ|

ಸಮಗ್ರ ನ್ಯೂಸ್: ನಾಲ್ವರನ್ನು ಮದುವೆಯಾಗಿ, ಇನ್ನೂ ಇಬ್ಬರನ್ನು ಎಂಗೇಜ್‌ಮೆಂಟ್‌ ಮಾಡಿಕೊಂಡು ಎಲ್ಲರನ್ನೂ ಪರಸ್ಪರ ಗೊತ್ತೇ ಆಗದಂತೆ ಮೇಂಟೇನ್‌ ಮಾಡುತ್ತಿದ್ದ ಚಪಲ ಚೆನ್ನಿಗರಾಯನನ್ನು ಪೊಲೀಸರು ಬಂಧಿಸಿದ್ದಾರೆ.

Ad Widget . Ad Widget .

ಶೇಖ್ ಫಾರೂಕ್ ಎಂಬಾತನೇ ನಾಲ್ವರು ಹೆಂಡಿರ ಗಂಡ. ಈತ ನಾಲ್ಕು ಮಂದಿ ಹೆಣ್ಣು ಮಕ್ಕಳನ್ನು ಮದುವೆಯಾಗಿ, ಇನ್ನೂ ಇಬ್ಬರ ಜತೆಗೆ ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದ. ನಾಲ್ವರೂ ಕೂಡ ಈತ ತನಗೊಬ್ಬಳಿಗೇ ಪತಿ ಅಂದುಕೊಂಡಿದ್ದರು. ನಾಲ್ಕು ಜನ ಹೆಂಡತಿಯರಿಗೂ ಅನುಮಾನ ಬಾರದ ರೀತಿಯಲ್ಲಿ ನೋಡಿಕೊಂಡಿದ್ದ. ಪ್ರತೀ ಪತ್ನಿಯ ಕಡೆಯಿಂದಲೂ ನಯವಾಗಿ ಹಣ, ಚಿನ್ನಾಭರಣ ಲಪಟಾಯಿಸುತ್ತಿದ್ದ.

Ad Widget . Ad Widget .

ಹಣದ ಆಸೆಗೆ ಹುಡುಗಿಯರಿಗೆ ವಂಚನೆ ಮಾಡುತ್ತಿದ್ದ ಆರೋಪಿಗೆ ಗ್ರಹಚಾರ ಕಡೆಗೂ ಕೈಕೊಟ್ಟಿದ್ದು, ನಾಲ್ಕನೇ ಹೆಂಡತಿಯ ಕೈಗೆ ಸಿಕ್ಕಿಬಿದ್ದಿದ್ದಾನೆ. ಮದುವೆಯಾದ ಒಂದು ದಿನಕ್ಕೆ ಮದುವೆ ಗಂಡಿನ ಬಂಡವಾಳ ಬಯಲಾಗಿದ್ದು, ಇನ್ನೊಬ್ಬಳು ಪತ್ನಿಯ ಜತೆಗಿದ್ದ ಹೊಸ ಪತ್ನಿಯ ಕೈಗೆ ಸಿಕ್ಕಿಬಿದ್ದಿದ್ದಾನೆ. ನವ ವಿವಾಹಿತೆಯ ಕಡೆಯವರು ವಂಚಕನನ್ನು ಚೆನ್ನಾಗಿ ಥಳಿಸಿ ಸಿದ್ದಾಪುರ ಪೊಲೀಸರಿಗೆ ಒಪ್ಪಿಸಿದ್ದಾರೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Comment

Your email address will not be published. Required fields are marked *