Ad Widget .

ದಟ್ಟ ಮಂಜಿನಿಂದ 22 ವಾಹನಗಳು ಸರಣಿ ಅಪಘಾತ

ಚಂಡೀಗಢ: ದಟ್ಟ ಮಂಜಿನಿಂದಾಗಿ ರಸ್ತೆ ಕಾಣದಂತಾಗಿ 22 ವಾಹನಗಳು ಸರಣಿ ಅಪಘಾತಕ್ಕೀಡಾಗಿರುವ ಘಟನೆ ಹರಿಯಾಣದಿಂದ ವರದಿಯಾಗಿದೆ.

Ad Widget . Ad Widget .

ಭಾನುವಾರ ಯಮುನಾ ನಗರದ ಬಳಿ ಅಂಬಲಾ-ಸಹಾರಪುರ ಹೆದ್ದಾರಿಯಲ್ಲಿ ಒಟ್ಟು 22 ವಾಹನಗಳು ಅಪಘಾತಕ್ಕೀಡಾಗಿವೆ. ಘಟಯಲ್ಲಿ 12ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪ್ರದೇಶದಲ್ಲಿ ದಟ್ಟವಾದ ಮಂಜು ಕವಿದಿದ್ದ ಕಾರಣ ರಸ್ತೆ ಸ್ಪಷ್ಟವಾಗಿ ಕಾಣಿಸದೇ ಅಪಘಾತಗಳು ಸಂಭವಿಸಿವೆ.

Ad Widget . Ad Widget .

ಘಟನೆಯಲ್ಲಿ ಹಲವು ವಾಹನಗಳು ಸಂಪೂರ್ಣ ನಜ್ಜುಗುಜ್ಜಾಗಿವೆ. ತಕ್ಷಣವೇ ಪೊಲೀಸರು ಸ್ಥಳಕ್ಕಾಗಮಿಸಿ ವಾಹನಗಳನ್ನು ತೆರವುಗೊಳಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ಟ್ರಾಫಿಕ್ ಎಸ್‌ಹೆಸ್‌ಒ ಲೊಕೇಶ್ ಕುಮಾರ್ ತಿಳಿಸಿದ್ದಾರೆ.

ವರದಿಗಳ ಪ್ರಕಾರ ಅಪಘಾತಕ್ಕೀಡಾದ ಮೊದಲ ವಾಹನದ ಪ್ರಯಾಣಿಕರು ವಾಹನದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಇನ್ನೊಂದು ವಾಹನ ಡಿಕ್ಕಿ ಹೊಡೆದಿದೆ. ಹೀಗೆ ಹಲವು ವಾಹನಗಳು ಸರಣಿ ಅಪಘಾತಕ್ಕೀಡಾಗಿವೆ. ಸದ್ಯ ಘಟನೆಯಲ್ಲಿ ಯಾವುದೇ ಸಾವು ವರದಿಯಾಗಿಲ್ಲ. ವಾಹನ ಚಾಲಕರಿಗೆ ವಾಹನವನ್ನು ನಿಧಾನವಾಗಿ ಚಲಾಯಿಸುವಂತೆ ಮನವಿ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Leave a Comment

Your email address will not be published. Required fields are marked *