Ad Widget .

ಸುಳ್ಯ: ಯುವ ಉದ್ಯಮಿ ನವೀನ್ ಮಲ್ಲಾರ ಅಪಹರಣ ಪ್ರಕರಣ| ಅಂಬ್ಯುಲೆನ್ಸ್ ನಲ್ಲಿ ಅಳಿಯನನ್ನೇ ಕಿಡ್ನಾಪ್ ಮಾಡಿಸಿದ್ರಾ ಕೈ ನಾಯಕಿ ದಿವ್ಯಪ್ರಭಾ ಚಿಲ್ತಡ್ಕ? ಸುಂಟಿಕೊಪ್ಪದಲ್ಲಿ ಹೈಡ್ರಾಮಾ…!

ಸಮಗ್ರ ನ್ಯೂಸ್: ತೀವ್ರ ಕುತೂಹಲ ಕೆರಳಿಸಿದ ಬೆಳ್ಳಾರೆಯ ಕಾಮಧೇನು ಜ್ಯುವೆಲ್ಲರ್ಸ್ ಮಾಲಕ ನವೀನ್ ಕಾಮಧೇನು ಅವರನ್ನು ಕಿಡ್ನಾಪ್ ಮಾಡಿರುವ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ.

Ad Widget . Ad Widget .

ಡಿ.19ರ ಮಧ್ಯಾಹ್ನ ಬೆಳ್ಳಾರೆಯ ಕಾವಿನಮೂಲೆಯಲ್ಲಿರುವ ನವೀನ್ ರ ಮನೆಗೆ ಬಂದ ತಂಡವೊಂದು ಮನೆಯಲ್ಲಿದ್ದ ನವೀನ್ ಅವರನ್ನು ಬಲವಂತವಾಗಿ ಕೊಂಡೊಯ್ದಿದ್ದು, ತಡೆದ ತಾಯಿಯ ಮೇಲೆ ಹಲ್ಲೆ ನಡೆಸಿ ಅಂಬ್ಯುಲೆನ್ಸ್ ನಲ್ಲಿ ಪರಾರಿಯಾಗಿದ್ದರು.

Ad Widget . Ad Widget .

ಇವರನ್ನು ಆಂಬ್ಯುಲೆನ್ಸ್ ನಲ್ಲಿ‌ ಅಪಹರಿಸಲಾಗಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಸುಳ್ಯದ ಶಿವ ಆಂಬ್ಯುಲೆನ್ಸ್ ನವರು ತಮ್ಮ ಗ್ರೂಪ್ ಗಳಿಗೆ ಮಾಹಿತಿ ರವಾನಿಸಿದ ಹಿನ್ನೆಲೆಯಲ್ಲಿ ಸುಂಟಿಕೊಪ್ಪ ಬಳಿ ಅಲ್ಲಿಯ ಆಂಬ್ಯುಲೆನ್ಸ್ ನವರು ಬೆಳ್ಳಾರೆಯಿಂದ ಹೋದ ಆಂಬ್ಯುಲೆನ್ಸನ್ನು ತಡೆದು ಅದರಲ್ಲಿದ್ದ ನವೀನ್ ಮತ್ತು ಇತರರನ್ನು ಸುಂಟಿಕೊಪ್ಪ ಪೊಲೀಸರಿಗೆ ಒಪ್ಪಿಸಿರುವುದಾಗಿ ತಿಳಿದುಬಂದಿದೆ.

ಸದ್ಯ ಸುಂಟಿಕೊಪ್ಪದಲ್ಲಿ ಪೊಲೀಸರ ವಶದಲ್ಲಿ ಅಪಹರಣಕಾರರು ಇದ್ದು, ನವೀನ್ ರನ್ನೂ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ. ನವೀನ್ ಮಲ್ಲಾರರ ಕೈ ಕಟ್ಟಿ‌ಹಾಕಿರುವ ಸ್ಥಿತಿಯಲ್ಲಿ ಕಂಡುಬಂದಿದ್ದು, ತನ್ನ ಪತ್ನಿ ಸ್ಪಂದನಾ ತಾಯಿ ದಿವ್ಯಪ್ರಭಾ ಚಿಲ್ತಡ್ಕರವರೇ ಪಿತೂರಿ ನಡೆಸಿ ಅಪಹರಣಗೈದಿದ್ದಾರೆ ಎಂದು ನವೀನ್ ಪ್ರತಿಕ್ರಿಯಿಸಿದ್ದಾರೆ.

ಸುಂಟಿಕೊಪ್ಪದ ಪೊಲೀಸ್ ಠಾಣೆಯಲ್ಲಿ ದಿವ್ಯಪ್ರಭಾ ಚಿಲ್ತಡ್ಕ, ಪರಶುರಾಮ ಚಿಲ್ತಡ್ಕ, ಸ್ಪಂದನಾ ನವೀನ್, ಮಾಧವ ಗೌಡ ಕಾಮಧೇನು ಸೇರಿದಂತೆ ಪ್ರಮುಖರು ಸೇರಿದ್ದು, ಹೈಡ್ರಾಮಾ ನಡೆಯುತ್ತಿರುವ ಬಗ್ಗೆ ವರದಿಯಾಗಿದೆ.

https://youtu.be/vERcxNpLjSE*

Leave a Comment

Your email address will not be published. Required fields are marked *