Ad Widget .

ಉದ್ಘಾಟನೆಗೆ ಮೊದಲೇ ಕುಸಿಯಿತು ಸೇತುವೆ| 13 ಕೋಟಿ ನೀರುಪಾಲು

ಸಮಗ್ರ ನ್ಯೂಸ್: ಗುಜರಾತ್‌ನ ಮೊರ್ಬಿಯಲ್ಲಿ ಉದ್ಘಾಟನೆಯಾದ ಒಂದೇ ವಾರದಲ್ಲಿ ಸೇತುವೆ ಕುಸಿದು 141 ಜನ ಮೃತಪಟ್ಟ ಪ್ರಕರಣ ಜನರ ಮನಸ್ಸಿಂದ ಮರೆಮಾಚುವ ಮುನ್ನವೇ ಬಿಹಾರದಲ್ಲಿ ಉದ್ಘಾಟನೆಗೆ ಮೊದಲೇ ಸೇತುವೆಯೊಂದು ಕುಸಿದಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಬೆಗುಸರಾಯ್‌ನ ಗಂಡಕ್‌ ನದಿಗೆ ಅಡ್ಡಲಾಗಿ 206 ಮೀಟರ್‌ ಉದ್ದದ ಸೇತುವೆಯನ್ನು ಮುಖ್ಯಮಂತ್ರಿ ನಬಾರ್ಡ್‌ ಯೋಜನೆ ಅಡಿಯಲ್ಲಿ 13 ಕೋಟಿ ರೂ. ವ್ಯಯಿಸಿ ನಿರ್ಮಿಸಲಾಗಿತ್ತು. 2016ರಲ್ಲಿ ಆರಂಭವಾದ ಸೇತುವೆ ನಿರ್ಮಾಣ ಕಾಮಗಾರಿಯು 2017ರಲ್ಲಿ ಮುಕ್ತಾಯಗೊಂಡಿತ್ತು. ಆದರೆ, ಇದನ್ನು ಲೋಕಾರ್ಪಣೆ ಮಾಡಿರಲಿಲ್ಲ.

Ad Widget . Ad Widget . Ad Widget .

ಡಿಸೆಂಬರ್‌ 15ರಂದೇ ಸೇತುವೆಯ ಮುಂಭಾಗದಲ್ಲಿ ಬಿರುಕು ಬಿಟ್ಟಿದ್ದು ಗೊತ್ತಾಗಿತ್ತು. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರದ ಮೂಲಕ ಮಾಹಿತಿಯನ್ನೂ ನೀಡಲಾಗಿತ್ತು. ಆದರೆ, ಸೇತುವೆ ದುರಸ್ತಿಗೊಳಿಸುವ ಮುನ್ನವೇ ಭಾನುವಾರ (ಡಿಸೆಂಬರ್‌ 18) ಕುಸಿದಿದೆ. ಕಳಪೆ ಕಾಮಗಾರಿ ಕುರಿತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Comment

Your email address will not be published. Required fields are marked *