Ad Widget .

ನಟ ದರ್ಶನ್ ಗೆ ‘ಪವರ್’ ತೋರಿಸಿದ ಪುನೀತ್ ಅಭಿಮಾನಿಗಳು| ಶೂ ಎಸೆದು ‘ದಾಸ’ನಿಗೆ ಅವಮಾನ!!

ಸಮಗ್ರ ನ್ಯೂಸ್: ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟ ದರ್ಶನ್ ಅವರು ಪವರ್ ಸ್ಟಾರ್ ಪುನೀತ್ ರಾಜ್‌ ಕುಮಾರ್‌ ವಿರುದ್ಧ ಮಾತನಾಡಿ, ಆರೋಪ ಹಿನ್ನೆಲೆ ನಿನ್ನೆ ತಡರಾತ್ರಿ ವಿಜಯನಗರ ಹೊಸಪೇಟೆಯ ವಾಲ್ಮೀಕಿ ವೃತ್ತದಲ್ಲಿ ನಟ ದರ್ಶನ್ ಮೇಲೆ ಶೂ ಎಸೆದು ಅಪಮಾನ ಮಾಡಿದ್ದಾರೆ.

Ad Widget . Ad Widget .

‘ಕ್ರಾಂತಿ’ ಸಿನಿಮಾದ ಹಾಡು ಬಿಡುಗಡೆ ಸಮಾರಂಭದಲ್ಲಿ ನಟಿ ರಚಿತಾ ರಾಮ್ ಮಾತನಾಡುವಾಗ ಅವರ ಬಳಿ ನಿಂತಿದ್ದ‌ ನಟ ದರ್ಶನ್ ಮೇಲೆ ಜನರ ಗುಂಪಿನಿಂದ ವ್ಯಕ್ತಿಯೊಬ್ಬರು ಅವರ ಮೇಲೆ ಶೂ ಎಸೆದು, ಪೋಸ್ಟರ್ ಹರಿದು ಹಾಕುವ ಮೂಲಕ ಕಾರ್ಯಕ್ರಮದಲ್ಲಿ ರಂಪಾಟ ಮಾಡಿದ್ದಾರೆ.

Ad Widget . Ad Widget .

ಇತ್ತೀಚೆಗೆ ಸಂದರ್ಶನವೊಂದರಲ್ಲಿ ದರ್ಶನ್ ಅವರು ಪುನೀತ್ ವಿರುದ್ಧ ಮಾತನಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದು, ಈ ವಿಚಾರಕ್ಕಾಗಿ ನಟ ದರ್ಶನ ಎದುರೇ ಶೂ ಎಸೆದು, ಡಾ. ಪುನೀತ್ ರಾಜಕುಮಾರ್ ಅವರ ಭಾವಚಿತ್ರ, ಧ್ವಜ, ಪೋಸ್ಟರ್ ಹಿಡಿದು ಕುಣಿದ್ದಾರೆ. ಅಪ್ಪು ಪರ ಅಭಿಮಾನಿಗಳು ಜಯಘೋಷಣೆ ಕೂಗುವ ಮೂಲಕ ಅಭಿಮಾನಿಗಳು ದರ್ಶನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಚಿತ್ರತಂಡ ತರಾತುರಿಯಲ್ಲಿ ಕಾರ್ಯಕ್ರಮ ಮುಗಿಸಿದ್ದಾರೆ.

Leave a Comment

Your email address will not be published. Required fields are marked *