Ad Widget .

ನಾಯಿಮರಿಗೂ ತನ್ನ ರೆಕ್ಕೆಗಳಡಿ ಆಶ್ರಯ ನೀಡಿದ ಕೋಳಿ.. ದಂಗಾದ ಹುಂಜ..| ಜಾಲತಾಣದಲ್ಲಿ ವೈರಲ್ ಆಗಿವೆ.

ಪರಸ್ಪರ ಪ್ರೀತಿ ತೋರುವ ಪ್ರಾಣಿ ಪಕ್ಷಿಗಳ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅದೇ ರೀತಿ ಈಗ ತಾಯಿ ಕೋಳಿ ಹಾಗೂ ಮರಿಗಳ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

Ad Widget . Ad Widget .

ಕೋಳಿಯೊಂದು ತನ್ನ ರೆಕ್ಕೆಗಳಡಿ ಮರಿಗಳಿಗೆ ರಕ್ಷಣೆ ನೀಡುತ್ತಾ ಬುಟ್ಟಿಯೊಂದರಲ್ಲಿ ಕುಳಿತಿರುತ್ತದೆ. ಇದೇ ಬುಟ್ಟಿಯಲ್ಲಿ ಎರಡು ಪುಟಾಣಿ ನಾಯಿಮರಿಗಳಿದ್ದು, ಅವುಗಳು ಕೂಡ ಆಶ್ರಯಕ್ಕಾಗಿ ಕೋಳಿಯ ರೆಕ್ಕೆಗಳಡಿ ನುಗ್ಗಲು ನೋಡುತ್ತವೆ. ಅಲ್ಲದೇ ಅಲ್ಲೇ ಆಶ್ರಯ ಪಡೆಯುತ್ತವೆ. ಆದರೆ ತನ್ನದಲ್ಲದ ಈ ನಾಯಿಮರಿಗಳನ್ನು ನೋಡಿ ಕೋಳಿ ಅವುಗಳನ್ನು ದೂರ ಸರಿಸುವುದಿಲ್ಲ. ಪ್ರತಿಯಾಗಿ ಅವುಗಳಿಗೆ ತನ್ನ ಮರಿಗಳಂತೆ ತನ್ನ ರೆಕ್ಕೆಗಳಡಿ ಆಶ್ರಯ ನೀಡುತ್ತದೆ. ಆದರೆ ಹತ್ತಿರ ನಿಂತಿದ್ದ ಹುಂಜ ಮಾತ್ರ ಇದನ್ನು ನೋಡಿ ದಂಗಾಗಿದ್ದು, ಹೇಂಟೆ ಕೋಳಿಯನ್ನೇ ನೋಡುತ್ತಾ ಗೊಂದಲದಿಂದ ನಿಂತಿದೆ. ಇತ್ತ ನಾಯಿಮರಿಗಳು ಕೋಳಿಯಲ್ಲೇ ತಮ್ಮ ತಾಯನ್ನು ಕಂಡಿದ್ದು, ತಾಯಿ ಕೋಳಿಯ ರೆಕ್ಕೆಗಳಡಿ ನೆಮ್ಮದಿಯಿಂದ ಮಲಗಿವೆ.

Ad Widget . Ad Widget .

@Yoda4ever ಎಂಬ ಟ್ವಿಟ್ಟರ್‌ ಪೇಜ್‌ನಿಂದ ಈ ವಿಡಿಯೋ ಅಪ್‌ಲೋಡ್ ಆಗಿದ್ದು ಲಕ್ಷಾಂತರ ಜನ ಈ 10 ಸೆಕೆಂಡ್‌ಗಳ ವಿಡಿಯೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹುಂಜದ ವರ್ತನೆ ನೋಡಿ ನೋಡುಗರು ತಮಾಷೆಯಾಗಿ ಕಾಮೆಂಟ್ ಮಾಡಿದ್ದು, ನಾಯಿ ಮರಿ ನೋಡಿ ಇದು ನನ್ನ ಮರಿ ಅಲ್ಲ ಎಂದು ಹುಂಜ ಹೇಳುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹೌದು ಡ್ಯಾಡಿ ನಿಜವಾಗಿಯೂ ಗೊಂದಲಕ್ಕೆ ಒಳಗಾಗಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಅಮ್ಮಂದಿರು ಅಮ್ಮನ ಕರ್ತವ್ಯ ಮಾಡುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ತಾಯಿ ನನ್ನ ಮಗು ಅನ್ನುತ್ತಿದೆ. ಆದರೆ ಏನು ಸರಿ ಇಲ್ಲ ಎಂದು ಹುಂಜ ಹೇಳುತ್ತಿದೆ ಎಂದು ಮತ್ತೊಬ್ಬರು ತಮಾಷೆ ಮಾಡಿದ್ದಾರೆ. ಅದು ನನ್ನ ಮಗುವಲ್ಲ ನನಗೆ ಡಿವೋರ್ಸ್ ನೀಡು ಎಂದು ಹುಂಜ ಕೇಳುತ್ತಿದೆ ಎಂಬಂತೆ ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ಕೋಳಿ ತಾಯಿ ಎಲ್ಲ ಮರಿಗಳನ್ನು ತನ್ನದೇ ಎಂಬಂತೆ ಕಾಳಜಿಯಿಂದ ನೋಡುತ್ತಿರುವುದು ಕಾಣಿಸುತ್ತಿದೆ.

Leave a Comment

Your email address will not be published. Required fields are marked *