Ad Widget .

ನಟಿ ಐಶ್ವರ್ಯಾ ರೈ ಹೆಸರಿನ ನಕಲಿ ಪಾಸ್‌ಪೋರ್ಟ್| ಮೂವರು ವಿದೇಶಿಯರು ಅಂದರ್

ನವದೆಹಲಿ: ನಟಿ ಐಶ್ವರ್ಯಾ ರೈ ಹೆಸರಿನ ನಕಲಿ ಪಾಸ್‌ಪೋರ್ಟ್ ಅನ್ನೇ ಮಾಡಿಸಿದ್ದ ಇಬ್ಬರು ನೈಜೀರಿಯನ್ ಹಾಗು ಒಬ್ಬ ಘಾನಾದ ಪ್ರಜೆಗಳನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ.

Ad Widget . Ad Widget .

ಉತ್ತರ ಪ್ರದೇಶದ ಗ್ರೇಟರ್ ನೊಯ್ಡಾನಲ್ಲಿ ವಾಸವಿದ್ದ ಈ ಮೂವರು ವಿವಿಧ ಸೈಬರ್ ಸಂಬಂಧಿತ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಮಾಜಿ ಮಿಲಿಟರಿ ಅಧಿಕಾರಿಯೊಬ್ಬರಿಗೆ ಮೋಸ ಮಾಡಿ ಸುಮಾರು 1.81 ಕೋಟಿ ಹಣ ಲಪಟಾಯಿಸಿದ್ದರು. ಅವರು ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಿದ್ದು, ಭಾರಿ ಮೊತ್ತದ ಹಣದ ಜೊತೆಗೆ ಐಶ್ವರ್ಯಾ ರೈ ಹೆಸರಿನಲ್ಲಿರುವ ನಕಲಿ ಪಾಸ್‌ಪೋರ್ಟ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಅದರ ಜೊತೆಗೆ ನಾಲ್ಕು ಕೋಟಿ ಮೌಲ್ಯದ ವಿದೇಶಿ ಕರೆನ್ಸಿಯನ್ನು ಸಹ ವಶಪಡಿಸಿಕೊಳ್ಳಲಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *