Ad Widget .

ತಾರಕಕ್ಕೇರಿದ ‘ಬೇಷರಮ್’ ಬಣ್ಣದ ಜಗಳ| ಸ್ಮೃತಿ ಇರಾನಿಯ ಮಿಸ್ ಇಂಡಿಯಾ ಕೇಸರಿ ಬಿಕಿನಿ ವಿಡಿಯೋ ವೈರಲ್

ಸಮಗ್ರ ನ್ಯೂಸ್: ದೀಪಿಕಾ ಪಡುಕೋಣ ಮತ್ತು ಶಾರುಖ್ ಅಭಿನಯದ ‘ಪಠಾಣ್’ ಚಿತ್ರದ ‘ಬೇಷರಂ ರಂಗ್’ ಹಾಡು ವಿವಾದದಲ್ಲಿದೆ. ಈ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಉಡುಗೆಯನ್ನು ಬಿಜೆಪಿ ಮತ್ತು ಹಿಂದುತ್ವವಾದಿ ಸಂಘಟನೆಗಳು ವಿರೋಧಿಸಿವೆ.

Ad Widget . Ad Widget .

ಕೇಸರಿ ಬಣ್ಣದ ಉಡುಪನ್ನು ನಾಚಿಕೆಯಿಲ್ಲದ ಬಣ್ಣ ಎಂದು ಕರೆಯುವ ಮೂಲಕ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ.

Ad Widget . Ad Widget .

ಈ ಮಧ್ಯೆ‌ ಟಿಎಂಸಿ ನಾಯಕ ರಿಜು ದತ್ತಾ ಅವರು ಸ್ಮೃತಿ ಇರಾನಿ ಅವರ ವೀಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ವಿವಾದವನ್ನು ಹೆಚ್ಚಿಸಿದ್ದಾರೆ. ದತ್ತಾ ಮಿಸ್ ಇಂಡಿಯಾ ಬ್ಯೂಟಿ ಪೆಜೆಂಟ್ 1998 ರ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಸ್ಮೃತಿ ಇರಾನಿ ಕೂಡ ಕೇಸರಿ ಬಣ್ಣದ ಬಿಕಿನಿಯನ್ನು ಧರಿಸಿದ್ದಾರೆ.

‘ಪಠಾಣ್’ ಚಿತ್ರದಲ್ಲಿ ಕೇಸರಿ ಬಿಕಿನಿ ತೊಟ್ಟಿದ್ದಕ್ಕಾಗಿ ದೀಪಿಕಾ ಅವರನ್ನು ಬಹಿಷ್ಕರಿಸುವ ಬಹಿಷ್ಕಾರ ದಳದ ದ್ವೇಷಪೂರಿತ ಮೂರ್ಖರು 1998 ರಲ್ಲಿ ‘ಕೇಸರಿ ಬಿಕಿನಿ’ ಹಾಕಿದ್ದರಿಂದ ಸ್ಮೃತಿ ಇರಾನಿಯನ್ನೂ ಬಹಿಷ್ಕರಿಸಬೇಕೆಂದು ರಿಜು ದತ್ತಾ ಅವರು ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಸ್ಮೃತಿ ಅವರು ಕ್ಯಾಬಿನೆಟ್ ಮಂತ್ರಿ. ಅವರ ಮೇಲೆ ಏಕೆ ಕ್ರಮಕೈಗೊಳ್ಳಬಾರದು? ಎಂದು ಪ್ರಶ್ನಿಸಿದ್ದಾರೆ.

ದತ್ತಾ ಅವರು ತಮ್ಮ ಎರಡನೇ ಟ್ವೀಟ್‌ನಲ್ಲಿ, ‘ಮಿಸ್ ಇಂಡಿಯಾ ಬ್ಯೂಟಿ ಪೆಜೆಂಟ್ 1998 ರಲ್ಲಿ ಸ್ಮೃತಿ ಇರಾನಿ ಧರಿಸಿದ್ದ ಉಡುಗೆ ನನಗೆ ಯಾವುದೇ ಸಮಸ್ಯೆ ಇಲ್ಲ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಅದು ಅವರ ಹಕ್ಕು ಮತ್ತು ಆಯ್ಕೆಯಾಗಿದೆ. ನನ್ನ ಹೋರಾಟ ಬಿಜೆಪಿ ಮತ್ತು ಅದರ ನಾಯಕರ ಮಹಿಳೆಯರ ಮೇಲಿನ ಬೂಟಾಟಿಕೆ ಮತ್ತು ದ್ವೇಷದ ವಿರುದ್ಹ ಎಂದಿದ್ದಾರೆ.

ಬಿಜೆಪಿ ವಕ್ತಾರ ಅಮಿತ್ ಮಾಳವಿಯಾ ಅವರ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ ರಿಜು ದತ್ತಾ ಅವರು ಸ್ಮೃತಿ ಇರಾನಿ ಅವರ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ. ಅಮಿತ್ ಮಾಳವಿಯಾ ಅವರು ಕೋಲ್ಕತ್ತಾ ಚಲನಚಿತ್ರೋತ್ಸವದ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

Leave a Comment

Your email address will not be published. Required fields are marked *