Ad Widget .

2500 ವರ್ಷಗಳ ಹಿಂದಿನ ಸಂಸ್ಕೃತ ಒಗಟು ಬಿಡಿಸಿದ ರಿಷಿ ಅತುಲ್

ಸಮಗ್ರ ನ್ಯೂಸ್: ಸಂಸ್ಕೃತ ವ್ಯಾಕರಣಕ್ಕೆ ಸಂಬಂಧಿಸಿದ, ಎರಡುವರೆ ಸಾವಿರ ವರ್ಷಗಳಿಂದ ಒಗಟಾಗಿಯೇ ಉಳಿದಿದ್ದ ಸವಾಲೊಂದನ್ನು ಭಾರತೀಯ ವಿದ್ಯಾರ್ಥಿ ಬಿಡಿಸಿದ್ದಾರೆ. ಐದನೇ ಶತಮಾನದ ವಿದ್ವಾಂಸರು ರಚಿಸಿದ್ದ ಒಗಟನ್ನು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಪಿಎಚ್‌ಡಿ ವಿದ್ಯಾರ್ಥಿ ರಿಷಿ ಅತುಲ್ ರಾಜ್‌ಪೋಪೆಟ್ ಬಿಡಿಸಿದ್ದಾರೆ.

Ad Widget . Ad Widget .

ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಮಾಡುತ್ತಿರುವ ರಿಷಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಕ್ರಿಸ್ತಪೂರ್ವ ಐದನೇ ಶತಮಾನದಿಂದಲೂ ವಿದ್ವಾಂಸರನ್ನು ಗೊಂದಲಕ್ಕೀಡು ಮಾಡಿದ್ದ ಸಂಸ್ಕೃತಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ವಿದ್ಯಾರ್ಥಿ ಬಗೆಹರಿಸಿದ್ದಾರೆ.

Ad Widget . Ad Widget .

ಪುರಾತನ ಸಂಸ್ಕೃತ ವಿದ್ವಾಂಸರಾದ ಪಾಣಿನಿ ಅವರು ಎರಡೂವರೆ ಸಾವಿರ ವರ್ಷಗಳಷ್ಟು ಹಳೆಯದಾದ ಪಠ್ಯವನ್ನು ಭಾರತೀಯ ವಿದ್ಯಾರ್ಥಿಯೊಬ್ಬರು ಡೀಕೋಡ್ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಒಂಬತ್ತು ತಿಂಗಳಿನಿಂದ ಈ ಸಮಸ್ಯೆ ಬಗೆಹರಿಸೋಕೆ ಸತತ ಪ್ರಯತ್ನ ಮಾಡಿದ್ದೆ. ಆದರೆ ಇದಕ್ಕೆ ಉತ್ತರ ಸಿಗುತ್ತಿರಲಿಲ್ಲ. ನಾನು ಬಿಟ್ಟುಬಿಡಲು ಸಿದ್ಧನಾಗಿದ್ದೆ. ನಂತರ ಒಂದು ಬ್ರೇಕ್ ಪಡೆಯಲು ಪುಸ್ತಕ ಮುಚ್ಚಿ, ಸ್ವಿಮ್ಮಿಂಗ್, ಸೈಕ್ಲಿಂಗ್, ಕುಕ್ಕಿಂಗ್, ಧ್ಯಾನ ರೂಢಿ ಮಾಡಿದೆ. ನಿಧಾನವಾಗಿ ಸಮಸ್ಯೆ ಅರ್ಥವಾಯಿತು. ಇದಾದ ಎರಡು ವರ್ಷದ ನಂತರ ನನಗೆ ಸಮಸ್ಯೆ ಪರಿಹರಿಸಲು ಸಾಧ್ಯವಾಯಿತು ಎನ್ನುತ್ತಾರೆ ರಿಷಿ.

ಶತಮಾನಗಳಿಂದ ಗೊಂದಲಕ್ಕೀಡು ಮಾಡಿದ್ದ ಸಮಸ್ಯೆಯನ್ನು ರಿಷಿ ಬಿಡಿಸಿದ್ದಾರೆ. ಭಾಷೆಯಲ್ಲಿ ಆಸಕ್ತಿ ಹೆಚ್ಚುತ್ತಿರುವ ಈ ಸಮಯದಲ್ಲಿ ಈ ರೀತಿ ಸಂಶೋಧನೆ, ಸಂಸ್ಕೃತ ಅಧ್ಯಯನದಲ್ಲಿ ಕ್ರಾಂತಿಯುಂಟು ಮಾಡಲಿದೆ ಎಂದು ಪ್ರೊ. ವರ್ಗಿಯಾನಿ ಹೇಳಿದ್ದಾರೆ.

Leave a Comment

Your email address will not be published. Required fields are marked *