Ad Widget .

ಕಿಡ್ನಿಸ್ಟೋನ್ (ಮೂತ್ರಕೋಶದ ಕಲ್ಲು) ಕಾರಣ ಮತ್ತು ಪರಿಹಾರೋಪಾಯಗಳು| ಇಲ್ಲಿದೆ‌ ಮಾಹಿತಿ…

ಸಮಗ್ರ ನ್ಯೂಸ್: ಇತ್ತೀಚಿನ ದಿನಗಳಲ್ಲಿ ಕಿಡ್ನಿ ಸ್ಟೋನ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಎಲ್ಲಾ ವಯಸ್ಸಿನ ಜನರಲ್ಲಿ ಕಿಡ್ನಿ ಸ್ಟೋನ್ ಕಾಣಿಸಿಕೊಳ್ಳುತ್ತಿದೆ. ಕಿಡ್ನಿ ಸ್ಟೋನ್ ಆದಾಗ ಆರಂಭಿಕ ಹಂತದಲ್ಲಿ ಯಾವುದೇ ರೋಗಲಕ್ಷಣಗಳು ಗೋಚರಿಸುವುದಿಲ್ಲ.

Ad Widget . Ad Widget .

ಆದರೆ ಸಮಯ ಕಳೆದಂತೆ ನಿಧಾನವಾಗಿ ಸಮಸ್ಯೆ ಹೆಚ್ಚಾಗುತ್ತಾ ಹೋಗುತ್ತದೆ. ಮೂತ್ರಪಿಂಡದ ಕಲ್ಲಿನ ಸಮಸ್ಯೆಯಿಂದಾಗಿ ತೀವ್ರ ನೋವು ಕಾಣಿಸಿಕೊಳ್ಳುತ್ತದೆ. ಕಿಡ್ನಿ ಸ್ಟೋನ್ ಆಗಲು ಕಾರಣ ಏನು ಎಂದು ಹುಡುಕಿದರೆ, ಇದಕ್ಕೆ ಹಲವಾರು ಕಾರಣಗಳಿರುತ್ತವೆ. ಕಡಿಮೆ ನೀರು ಕುಡಿಯುವುದು, ಹೆಚ್ಚು ಜಂಕ್ ಫುಡ್ ಸೇವನೆ, ಅಧಿಕ ದೇಹ ತೂಕ ಹೀಗೆ ಬೇರೆ ಬೇರೆ ಕಾರಣಗಳಿಂದ ಕಿಡ್ನಿ ಸ್ಟೋನ್ ಆಗುತ್ತದೆ. ಕಿಡ್ನಿ ಸ್ಟೋನ್ ಆಗಿದ್ದಾಗ ದೇಹದಲ್ಲಿ ಕೆಲವೊಂದು ಲಕ್ಷಣಗಳು ಕಂಡು ಬರುತ್ತವೆ . ಇದನ್ನು ನಿರ್ಲಕ್ಷಿಸಿದರೆ ಸಮಸ್ಯೆ ಉಲ್ಬಣವಾಗುತ್ತದೆ.

Ad Widget . Ad Widget .

ಕಿಡ್ನಿ ಸ್ಟೋನ್ ಗೆ ಕಾರಣ ಮತ್ತು ತಡೆಗಟ್ಟುವ ವಿಧಾನ :
ಮೂತ್ರಪಿಂಡದ ಕಲ್ಲಿಗೆ ಅನೇಕ ಕಾರಣಗಳಿರುತ್ತವೆ. ಮೂತ್ರಪಿಂಡದ ಕಲ್ಲಿನ ಸಮಸ್ಯೆ ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚು ಕಂಡುಬರುತ್ತದೆ. ಕಿಡ್ನಿ ಸ್ಟೋನ್ ಸಮಸ್ಯೆಯಿಂದ ನೀವು ತೊಂದರೆಗೀಡಾಗಿದ್ದರೆ, ತಕ್ಷಣವೇ ಹೊರಗಿನ ವಸ್ತುಗಳನ್ನು ತಿನ್ನುವುದನ್ನು ನಿಲ್ಲಿಸಬೇಕು. ಹೆಚ್ಚುವರಿ ಸಕ್ಕರೆ, ಉಪ್ಪು ಮತ್ತು ಪ್ರೋಟೀನ್, ಮುಂತಾದವುಗಳನ್ನು ಕಡಿಮೆ ಮಾಡಬೇಕು. ಮೂತ್ರಪಿಂಡದ ಕಲ್ಲಿನ ಸಮಸ್ಯೆಯಿಂದ ಬಳಳುತಿರುವವರು ತಾವು ಸೇವಿಸುವ ಆಹಾರದ ಬಗ್ಗೆ ವಿಶೇಷ ಗಮನ ವಹಿಸಬೇಕು. ಇದರೊಂದಿಗೆ ನಿತ್ಯದ ದಿನಚರಿಯಲ್ಲಿ ವ್ಯಾಯಾಮ ಮತ್ತು ಯೋಗಕ್ಕೂ ಒಂದು ಜಾಗವಿರಲಿ.

ಈ ಆಹಾರಗಳು ಸಮಸ್ಯೆಯನ್ನು ಹೆಚ್ಚಿಸಬಹುದು :
ಗೋಮಾಂಸ, ಕೋಳಿ, ಮೊಟ್ಟೆ, ಹಾಲು, ಚೀಸ್, ಮೊಸರು, ಪಾಲಕ್ ಇವುಗಳು ಮೂತ್ರದಲ್ಲಿ ಯೂರಿಕ್ ಆಮ್ಲದ ಮಟ್ಟವನ್ನು ಹೆಚ್ಚಿಸುತ್ತವೆ. ಇದರಿಂದಾಗಿ ಮೂತ್ರಪಿಂಡದ ಕಲ್ಲಿನ ಅಪಾಯವೂ ಹೆಚ್ಚಾಗುತ್ತದೆ. ಆದ್ದರಿಂದ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ, ಈ ಆಹಾರ ವಸ್ತುಗಳಿಂದ ದೂರವಿರಿ. ಇದಲ್ಲದೆ, ವಿಪರೀತ ಹೊಟ್ಟೆ ನೋವು, ಮೂತ್ರದಲ್ಲಿ ರಕ್ತ, ಜ್ವರ ಮತ್ತು ವಾಂತಿ ಇದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಕಿಡ್ನಿ ಸ್ಟೋನ್ ಅಪಾಯವನ್ನು ತಪ್ಪಿಸುವುದು ಹೇಗೆ ? :
ಕಿಡ್ನಿ ಸ್ಟೋನ್‌ಗಳಂತಹ ಸಮಸ್ಯೆಗಳನ್ನು ತಪ್ಪಿಸಲು ದೇಹದಲ್ಲಿ ನೀರಿನ ಕೊರತೆ ಇರಬಾರದು. ಇದಕ್ಕಾಗಿ ದಿನವಿಡೀ ಕನಿಷ್ಠ 8 ಗ್ಲಾಸ್ ನೀರನ್ನು ಕುಡಿಯಬೇಕು. ನೀರನ್ನು ಹೊರತುಪಡಿಸಿ, ಆಹಾರದಲ್ಲಿ ಹಣ್ಣಿನ ರಸವನ್ನು ಸಹ ಸೇರಿಸಬಹುದು.

( ಸೂಚನೆ : ಇಲ್ಲಿ ನೀಡಿರುವ ಮಾಹಿತಿ, ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಬಳಸುವ ಮುನ್ನ ತಜ್ಞರ ಸಲಹೆ ಪಡೆದುಕೊಳ್ಳಿ)

Leave a Comment

Your email address will not be published. Required fields are marked *