Ad Widget .

ಕನ್ನಡತಿ ಧಾರಾವಾಹಿ ಅಭಿಮಾನಿಗಳಿಗೆ ಬಿಗ್ ಶಾಕ್| 15 ದಿನಗಳಲ್ಲಿ ಧಾರಾವಾಹಿ‌!ಮುಗಿಯುತ್ತಾ?

ಸಮಗ್ರ ನ್ಯೂಸ್: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ ಸೀರಿಯಲ್ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ.

Ad Widget . Ad Widget .

ಜನ ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ, ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡ್ತಿದೆ. ಭುವಿ ಅಮ್ಮಮ್ಮನ ಜವಾಬ್ದಾರಿ ತೆಗೆದುಕೊಂಡಿದ್ದಾಳೆ. ಹರ್ಷನಿಗೆ ಈಗ ಸ್ವಲ್ಪ ನೆಮ್ಮದಿಯಾಗಿದೆ. ಆದ್ರೆ ಈ ಡಿವೋರ್ಸ್ ಪ್ಲ್ಯಾನ್ ತಲೆಯಲ್ಲಿ ಕೊರೀತಾ ಇದೆ. ಹರ್ಷನ 15 ದಿನ ಮಿಷನ್ ಅರ್ಥ ಏನು ಅಂತಿದ್ದಾರೆ ಅಭಿಮಾನಿಗಳು.

Ad Widget . Ad Widget .

ಹರ್ಷನ 15 ದಿನದ ಮಿಷನ್ ಎಂದು ಕೇಳಿ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ. ಈಗಾಗಲೇ ಧಾರಾವಾಹಿ ಮುಗಿಯುತ್ತೇ ಎನ್ನುವ ಸುದ್ದಿ ಎಲ್ಲೆಡೆ ಹಬ್ಬಿದೆ. ಅದಕ್ಕೆ ತಕ್ಕಂತೆ ರಂಜನಿ ರಾಘವನ್ ಅವರು, ಬಾಯಲ್ಲಿ ಸಿಹಿ ಇರುವಾಗ್ಲೇ ಮುಗಿಸಬೇಕು ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿದ್ರು. ಈಗ ಹರ್ಷನ ಮಿಷನ್ 15 ದಿನ ಅದೇ ಅರ್ಥನಾ ಎಂದು ಅಭಿಮಾನಿಗಳು ಕೇಳ್ತಾ ಇದ್ದಾರೆ. ಧಾರಾವಾಹಿ ಮುಗಿಸಬೇಡಿ ಎನ್ನುತ್ತಿದ್ದಾರೆ.

ವರುಗೆ ಹರ್ಷ ಬುದ್ಧಿ ಕಲಿಸುತ್ತಾನಾ? 15 ದಿನದಲ್ಲಿ ಧಾರಾವಾಹಿ ಮುಗಿಯುತ್ತಾ? ಎಲ್ಲ ಕುತೂಹಲಕ್ಕಾಗಿ ನೀವೂ ಕನ್ನಡತಿ ಸೀರಿಯಲ್ ನೋಡಬೇಕು.

Leave a Comment

Your email address will not be published. Required fields are marked *