ಸಮಗ್ರ ನ್ಯೂಸ್: ಮಹಿಳೆಯೊಬ್ಬರು ನಾಲ್ಕು ಕಾಲುಗಳಿರುವ ಹೆಣ್ಣು ಮಗುವಿಗೆ ಜನ್ಮ ನೀಡಿರುವುದು ಜನರಲ್ಲಿ ಕುತೂಹಲ ಮೂಡಿಸಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ.
ಗ್ವಾಲಿಯರ್ ನ ಕಮಲರಾಜ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಿಭಾಗದಲ್ಲಿ ಸಿಕಂದರ್ ಕಂಪೂ ಪ್ರದೇಶದ ಆರತಿ ಕುಶ್ವಾಹ ಎಂಬುವವರು ನಾಲ್ಕು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ನವಜಾತ ಶಿಶು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮಗುವಿಗೆ ನಾಲ್ಕು ಕಾಲುಗಳಿದ್ದು ಆಕೆಗೆ ದೈಹಿಕ ಅಂಗವಿಕಲತೆ ಇದೆ. ಹೆಚ್ಚುವರಿ ಭ್ರೂಣದಿಂದಾಗಿ ಈ ರೀತಿ ಉಂಟಾಗುತ್ತದೆ. ವೈದ್ಯಕೀಯ ವಿಜ್ಞಾನ ಭಾಷೆಯಲ್ಲಿ ಇದಕ್ಕೆ ಇಶಿಯೋಪಾಗಸ್ ಎಂದು ಕರೆಯುತ್ತೇವೆ ಎಂದು ಜಯರೋಗ್ಯ ಆಸ್ಪತ್ರೆ ಸಮೂಹದ ಸೂಪರಿಂಟೆಂಡೆಟ್ ವೈದ್ಯ ಡಾ. ಆರ್ ಕೆ ಎಸ್ ಧಕಡ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಹೆಚ್ಚುವರಿಯಾಗಿರುವ ಕಾಲುಗಳು ನಿಷ್ಕ್ರಿಯಗೊಂಡಿದ್ದು ವೈದ್ಯರು ಆಪರೇಷನ್ ಮೂಲಕ ಹೆಚ್ಚುವರಿ ಕಾಲುಗಳನ್ನು ತೆಗೆಯಲಿದ್ದಾರೆ. ನಂತರ ಆಕೆ ಸಾಮಾನ್ಯಳಂತೆ ನಡೆದಾಡಬಹುದು ಎಂದು ಡಾ ಧಕಡ್ ತಿಳಿಸಿದ್ದಾರೆ.
ಒಟ್ಟಾರೆ ನೈಸರ್ಗಿಕ ನಿಯಮಗಳು ಕೆಲವೊಮ್ಮೆ ಆಶ್ಚರ್ಯಕರ ಸಂಗತಿಗಳಿಗೆ ಕಾರಣವಾಗುತ್ತವೆ. ಈ ನಿಟ್ಟಿನಲ್ಲಿ ತಾಯಿಯೊಬ್ಬರು ಈ ರೀತಿಯ ಮಗುವಿಗೆ ಜನ್ಮ ನೀಡಿರುವುದು ವಿಶೇಷವಾಗಿದೆ.