ಕೇರಳ ಕಬಡ್ಡಿ ತಂಡದ ಮಾಜಿ ನಾಯಕ ಸುನಿಲ್ ಮಂಜೇಶ್ವರ ಇನ್ನಿಲ್ಲ

ಸಮಗ್ರ ನ್ಯೂಸ್: ಕೇರಳ ರಾಜ್ಯ ಅಮೆಚೂರು ಕಬಡ್ಡಿ ತಂಡದ ಮಾಜಿ ನಾಯಕ ಹಾಗೂ ರಾಷ್ಟ್ರೀಯ ಕಬಡ್ಡಿ ತಂಡದ ಮಾಜಿ ಆಟಗಾರ ಮಂಜೇಶ್ವರ ನಿವಾಸಿ ಸುನಿಲ್ ಕುಮಾರ್ (53) ಡಿ.15ರಂದು ಸ್ವಗೃಹದಲ್ಲಿ ನಿಧನಹೊಂದಿದರು.

Ad Widget ... ..

ಅತೀವ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ಇವರು , ಗ್ಯಾಂಗ್ರೀನ್ ಗೆ ಒಳಗಾಗಿ ಹಲವು ತಿಂಗಳಿನಿಂದ ಅಸೌಖ್ಯಕ್ಕೊಳಗಾಗಿದ್ದರು. ಕೇರಳದಲ್ಲಿ ಹಿಂದೆ ಇದ್ದಂತಹ ಅಬಕಾರಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಅನಂತರ ಉದ್ಯಮ ನಡೆಸುತ್ತಿದ್ದರು.

Ad Widget

ಕಬ್ಬಡ್ಡಿ ಕೇರಳ ರಾಜ್ಯ ತಂಡದ ನಾಯಕರಾಗಿ ಹಲವು ವರ್ಷಗಳ ಕಾಲ ನೇತೃತ್ವ ವಹಿಸಿ ಹಲವು ಗೆಲುವಿನ ಜವಾಬ್ದಾರಿಯನ್ನು ನಿರ್ವಹಿಸಿದ್ದರು. ರಾಷ್ಟ್ರಮಟ್ಟದ ತಂಡದಲ್ಲಿ ಉತ್ತಮ ಆಟಗಾರರಾಗಿ ಮಿಂಚಿದ್ದ ಇವರು , ಕಾಸರಗೋಡು ಜಿಲ್ಲೆಯ ಹಲವು ಯುವ ಆಟಗಾರರಿಗೆ ರಾಜ್ಯ ತಂಡದಲ್ಲಿ ಪ್ರತಿನಿಧಿಸಲು ಅವಕಾಶವನ್ನು ಕಲ್ಪಿಸಿದ್ದರು. ಮೃತರಿಗೆ ಉಮಾಮಹೇಶ್ವರಿ ಕಬ್ಬಡ್ಡಿ ಅಮೆಚೂರು ಅಸೋಸಿಯೇಷನ್ ತೀವ್ರ ಸಂತಾಪ ವ್ಯಕ್ತಪಡಿಸಿದೆ.

Leave a Comment

Your email address will not be published. Required fields are marked *