ಸುಳ್ಯ: ತಹಶಿಲ್ದಾರ್ ಹೆಸರು ದುರುಪಯೋಗ| ಖಡಕ್ ಎಚ್ಚರಿಕೆ ನೀಡಿದ ಅನಿತಾಲಕ್ಷ್ಮಿ

ಸಮಗ್ರ ನ್ಯೂಸ್: ಸುಳ್ಯ ತಾಲೂಕು ಕಚೇರಿಯಲ್ಲಿ ಮದ್ಯವರ್ತಿಗಳ ಹಾವಳಿ ಹೆಚ್ಚಿದ್ದು, ತಹಶಿಲ್ದಾರರ ಹೆಸರು ದುರುಪಯೋಗ ಮಾಡಿಕೊಳ್ಳುತ್ತಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸುಳ್ಯ ತಹಶಿಲ್ದಾರ್ ಅನಿತಾಲಕ್ಷ್ಮಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

Ad Widget ... ..

ಸಾರ್ವಜನಿಕರು ಯಾವುದೇ ಕೆಲಸಗಳಿಗೆ ತಹಶಿಲ್ದಾರ್ ಅಥವಾ ಅವರ ಇಲಾಖೆಯ‌ ಸಿಬ್ಬಂದಿಗೆ ಲಂಚ ನೀಡಬೇಕಿಲ್ಲ. ತಹಶಿಲ್ದಾರರ ಹೆಸರು ದುರುಪಯೋಗಪಡಿಸಿಕೊಂಡು ಈಗಾಗಲೇ ಕೆಲವು ಕೆಳಮಟ್ಟದ ಸಿಬ್ಬಂದಿ ಸಾರ್ವಜನಿಕರಿಂದ ಲಂಚ ಸ್ವೀಕರಿಸುತ್ತಿರುವ ದೂರುಗಳು ಕೇಳಿಬಂದಿದೆ.

Ad Widget

ಈ ರೀತಿಯಲ್ಲಿ ಇನ್ನು ಮುಂದೆ ಸಾರ್ವಜನಿಕರಿಂದ ಅಧಿಕಾರಿಗಳು ಅಥವಾ ಮದ್ಯವರ್ತಿಗಳು ಹಣ ಪೀಕಿಸುವುದು ಕಂಡುಬಂದರೆ ತಕ್ಷಣ ಸುಳ್ಯ ತಹಶಿಲ್ದಾರರ ಕಚೇರಿಗೆ ಲಿಖಿತ ದೂರು ಸಲ್ಲಿಸಬೇಕು. ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಹಶಿಲ್ದಾರ್ ಅನಿತಾಲಕ್ಷ್ಮಿ ‘ಸಮಗ್ರ ಸಮಾಚಾರ’ ಕ್ಕೆ ತಿಳಿಸಿದ್ದಾರೆ.

Leave a Comment

Your email address will not be published. Required fields are marked *