ಸಮಗ್ರ ನ್ಯೂಸ್: ರಾಜ್ಯ ಸರ್ಕಾರದಿಂದ ಕಾನೂನು, ಸಂಚಾರ ನಿರ್ವಹಣೆಗೆ ಮಹತ್ವದ ಕ್ರಮ ತೆಗೆದುಕೊಂಡಿದ್ದು, 9 ಪೊಲೀಸ್ ಉಪ-ವಿಭಾಗ, ನಾಲ್ಕು ಸಂಚಾರಿ ಠಾಣೆಗಳನ್ನು ಹೊಸದಾಗಿ ತೆರೆಯಲು ಅನುಮತಿ ನೀಡಿ, ಆದೇಶಿಸಿದೆ.
ಈ ಕುರಿತಂತೆ ಒಳಾಡಳಿತ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ಭ್ರಷ್ಟಾಚಾರ ನಿಗ್ರಹ ದಳದಿಂದ ಪೊಲೀಸ್ ಇಲಾಖೆಗೆ ಹಂಚಿಕೆ ಮಾಡಿರುವ ಒಟ್ಟು 221 ಹುದ್ದೆಗಳಲ್ಲಿ ಈ ಕೆಳಕಂಡಂತೆ ಮರು ಹಂಚಿಕೆ ಮಾಡಿಕೊಳ್ಳಲು ಸಹಮತಿ ನೀಡಿಲಾಗಿದೆ.
ಹೊಸದಾಗಿ 9 ಪೊಲೀಸ್ ಉಪ-ವಿಭಾಗವನ್ನು ತೆರೆಯಲು ಅನುಮತಿಸಲಾಗಿದ್ದು ಬೆಂಗಳೂರಿನಲ್ಲಿ ವಿಜಯನಗರ ಸಂಚಾರ ಉಪ-ವಿಭಾಗ, ಹೆಚ್ ಎಸ್ ಆರ್ ಲೇಔಟ್ ಸಂಚಾರ ಉಪ ವಿಭಾಗ, ಪೀಣ್ಯ ಉಪ ವಿಭಾಗ, ಕೆಂಗೇರಿ ಉಪ-ವಿಭಾಗ, ವಿಜಯನಗರ ಉಪವಿಭಾಗಗಳನ್ನು ತೆರೆಯಲು ಅನುಮತಿ ನೀಡಿದೆ.

ಉಳಿದಂತೆ ಮೈಸೂರು ನಗರ, ಶಿವಮೊಗ್ಗ ಉಪ ವಿಭಾಗ-2,
ಚನ್ನರಾಯಪಟ್ಟಣ ಉಪ ವಿಭಾಗ,
ವಿಜಯಪುರ ಗ್ರಾಮಾಂತರ ಉಪ ವಿಭಾಗ, ಹಾಗೂ ದ.ಕ ಜಿಲ್ಲೆಯ ಬೆಳ್ತಂಗಡಿ ಉಪ ವಿಭಾಗ ಸೇರಿ 9 ಕಡೆ ನೂತನ ಠಾಣೆಗಳನ್ನು ತೆರೆಯಲಾಗುತ್ತದೆ.

ಇನ್ನು ಬೆಂಗಳೂರು ನಗರ ಸುಗಮ ಸಂಚಾರ ನಿರ್ವಣೆಗಾಗಿ ಹೊಸದಾಗಿ ನಾಲ್ಕು ಸಂಚಾರ ಪೊಲೀಸ್ ಠಆಣೆಗಳನ್ನು ತೆರೆಯಲಾಗುತ್ತಿದೆ. ಅದಕ್ಕಾಗಿ ಎಸಿಬಿಯಿಂದ ಮಿಕ್ಕುಳಿದಂತ ಹುದ್ದೆಗಳನ್ನು ಮರುಹಂಚಿಕೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ಸಂಚಾರ ನಿರ್ವಹಣೆಗಾಗಿ ತಲಘಟ್ಟಪುರ, ಬೆಳ್ಳಂದೂರು, ಹೆಣ್ಣೂರು, ಮಹದೇವಪುರಗಳಲ್ಲಿ ನೂತನ ಸಂಚಾರಿ ಪೊಲೀಸ್ ಠಾಣೆಗಳನ್ನು ತೆರೆಯಲು ಒಪ್ಪಿಗೆ ಸೂಚಿಸಲಾಗಿದೆ.
ಒಟ್ಟಾರೆಯಾಗಿ ರಾಜ್ಯ ಸರ್ಕಾರದಿಂದ ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ, ಬೆಂಗಳೂರಿನ ಸಂಚಾರ ನಿರ್ವಹಣೆಯ ಭಾಗವಾಗಿ 9 ಉಪ -ವಿಭಾಗೀಯ ಪೊಲೀಸ್ ಠಾಣೆ, ಸಂಚಾರ ಠಾಣೆಯನ್ನು ತೆರೆಯಲಾಗುತ್ತಿದೆ.