Ad Widget .

‘ಪಠಾಣ್’ ಚಿತ್ರದಲ್ಲಿ ಕೇಸರಿಗೆ ಅವಮಾನ| ದೀಪಿಕಾಳ ಸಾಪ್ಟ್ ಪೋರ್ನ್ ಗೆ ನೆಟ್ಟಿಗರು ಗರಂ

ಸಮಗ್ರ ನ್ಯೂಸ್: ಬಾಲಿವುಡ್‌ ನಟ ಶಾರುಖ್‌ ಖಾನ್‌ ಪ್ರಮುಖ ಪಾತ್ರದಲ್ಲಿ ಇರುವ ‘ಪಠಾಣ್‌’ ಚಿತ್ರಕ್ಕೆ ಬಿಡುಗಡೆಯ ಮುನ್ನವೇ ವಿರೋಧ ಕೇಳಿ ಬಂದಿದೆ. ಶಾರುಕ್ ಖಾನ್ ಬಹುನಿರೀಕ್ಷಿತ ಪಠಾಣ್ ಸಿನಿಮಾದ ‘ಬೇಷರಮ್ ರಂಗ್’ ವಿಡಿಯೊ ಹಾಡು ಕಳೆದ ಸೋಮವಾರ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.

Ad Widget . Ad Widget .

ಇದರಲ್ಲಿ ದೀಪಿಕಾ ಪಡುಕೋಣೆ ಅವರು ಹಾಟ್ ಆಗಿ ಕಾಣಿಸಿಕೊಂಡಿದ್ದು, ಶಾರುಕ್ ಜೊತೆ ಸೊಂಟ ಬಳಸುತ್ತಾ ಹೆಜ್ಜೆ ಹಾಕಿದ್ದಾರೆ. ಹಾಡಿನಲ್ಲಿ ಸಾಪ್ಟ್ ಪೋರ್ನ್ ಗೆ ಸ್ಥಾನ ಕಲ್ಪಿಸಲಾಗಿದೆ ಎಂಬ ಆರೋಪ‌ ಕೇಳಿಬಂದಿದೆ.

Ad Widget . Ad Widget .

ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಸಾಕಷ್ಟು ಹಾಟ್‌ ಹಾಗೂ ಬೋಲ್ಡ್‌ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ದೃಶ್ಯದಲ್ಲಿ ದೀಪಿಕಾ ಕೇಸರಿ ಬಣ್ಣದ ಬಿಕಿನಿ ರೀತಿಯ ಬಟ್ಟೆ ತೊಟ್ಟು ಹಾಟ್‌ ದೃಶ್ಯದಲ್ಲಿ ಕಾಣಿಸಿಕೊಂಡಿರುವುದು ಈಗ ಹಿಂದುಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಸಿನಿಮಾಗೆ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗಿದೆ.

ಅಲ್ಲದೇ ಹಾಡಿನ ಕೊನೆಯಲ್ಲಿ ದೀಪಿಕಾ ಕೇಸರಿ ಬಣ್ಣದ ಬಿಕಿನಿ ಹಾಕಿಕೊಂಡು ಕುಣಿದಿದ್ದಾರೆ. ಈ ಸನ್ನಿವೇಶ ಹಾಗೂ ಹಾಡಿಗೆ ಬೇಷರಮ್ ರಂಗ್ (ನಾಚಿಕೆಯಿಲ್ಲದ ಬಣ್ಣ) ಎಂದು ಹೆಸರಿಟ್ಟಿರುವುದು ಕೆಲವರನ್ನು ಕೆರಳಿಸಿದೆ. ‘ಹಿಂದೂ ಭಗವಾ ಧ್ವಜದ ಸಂಕೇತವಾದ ಕೇಸರಿ ಬಣ್ಣದ ಬಿಕಿನಿ ಧರಿಸಿ ಅದಕ್ಕೆ ಬೇಷರಮ್ ರಂಗ್ ಎಂದು ಹೆಸರಿಟ್ಟಿರುವುದು ಸರಿಯಲ್ಲ. ಈ ಚಿತ್ರವನ್ನು ಬಾಯ್ಕಾಟ್ ಮಾಡಬೇಕು’ ಎಂದು ಟ್ವಿಟರ್‌ನಲ್ಲಿ ಕೆಲವರು ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ.

ಅಲ್ಲದೇ ಇನ್ನೂ ಕೆಲವರು, ‘ಅಶ್ಲೀಲತೆ ಈ ಹಾಡಿನಲ್ಲಿ ತುಂಬಿ ತುಳಕುತ್ತದೆ. ದೀಪಿಕಾ ಪಡುಕೋಣೆ ನಿರ್ಲಜ್ಜೆಯಿಂದ ಅತ್ಯಂತ ಕನಿಷ್ಠ ಬಟ್ಟೆ ಹಾಕಿ ಮೈ ಬಳುಕಿಸಿದ್ದಾರೆ. ಇಂದು ಹಿಂದೂ ಸಂಸ್ಕೃತಿಗೆ ವಿರುದ್ಧ’ ಎಂದು ಇನ್ನೂ ಕೆಲವರು ಟ್ವೀಟ್ ಮಾಡಿದ್ದಾರೆ.

Leave a Comment

Your email address will not be published. Required fields are marked *