ಬೆಳ್ತಂಗಡಿ: ಬಂದಾರು‌ ಗ್ರಾ.ಪಂ ಸಿಬ್ಬಂದಿ ನಿಧನ

ಸಮಗ್ರ ನ್ಯೂಸ್: ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮ ಪಂಚಾಯತ್ ಜನಸ್ನೇಹಿ ಉದ್ಯೋಗ ಖಾತ್ರಿ ಡಾಟಾ ಎಂಟ್ರಿ ಸಿಬ್ಬಂದಿ ಮೊಗ್ರು ಗ್ರಾಮದ ನಾಯಿಮಾರು ಲಲಿತ (38 ಪ್ರಾ) ಇವರು ಅನಾರೋಗ್ಯದಿಂದ ಸ್ವಗೃಹದಲ್ಲಿ ವಿಧಿವಿಶರಾದರು.

Ad Widget ... ..

ಮೃತರು ಪತಿ ಲವ, ಮಕ್ಕಳಾದ ಸ್ವಸ್ಥಿಕ್ ,ಸಾಕ್ಷಿತ್ ಇವರನ್ನು ಅಗಲಿದ್ದಾರೆ. ಬಂದಾರು ಗ್ರಾಮ ಪಂಚಾಯತ್ ನಲ್ಲಿ 14 ವರ್ಷ ಸೇವೆ ಸಲ್ಲಿಸಿರುತ್ತಾರೆ. ಜನರ ಜೊತೆ ನಗುಮೊಗದ ಜನಸ್ನೇಹಿ ಕೆಲಸ ಕಾರ್ಯದಲ್ಲಿ ನಿರತರಾಗಿ,ಅಪಾರ ಜನರ ಪ್ರೀತಿ ಪಾತ್ರರಾಗಿದ್ದರು.

Ad Widget

ಬಂದಾರು ಗ್ರಾ.ಪಂ ಅಧ್ಯಕ್ಷೆ ಪರಮೇಶ್ವರಿ ಗೌಡ, ಉಪಾಧ್ಯಕ್ಷ ಗಂಗಾಧರ, ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ, ಗ್ರಾ.ಪಂ ಸದಸ್ಯರು ಸಿಬ್ಬಂದಿ ವರ್ಗ ಊರಿನ ಗಣ್ಯರು ಸಂತಾಪ ಸಲ್ಲಿಸಿದರು.

Leave a Comment

Your email address will not be published. Required fields are marked *