Ad Widget .

ಪತ್ನಿಯ ಐಷಾರಾಮಿ ಆಸೆಗೆ ಬೇಸತ್ತ ಪತಿ| ಹೆಂಡತಿ ಕಾಟ ತಾಳಲಾರದೆ ‌ನವವಿವಾಹಿತ ಆತ್ಮಹತ್ಯೆ

ಸಮಗ್ರ ನ್ಯೂಸ್: ಹೆಂಡತಿ ಕಾಟ ತಾಳಲಾರದೇ ನವವಿವಾಹಿತನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಿಲಿಕಾನ್‌ ಸಿಟಿಯ ಉಲ್ಲಾಳದ ಬಳಿಯ ಎಂವಿ ಲೇಔಟ್ನಲ್ಲಿ ನಡೆದಿದೆ. ಮಹೇಶ್ವರ(24) ಮೃತ ದುರ್ದೈವಿ.

Ad Widget . Ad Widget .

ಕಳೆದ ಆಗಸ್ಟ್ 21 ರಂದು ಕವನಾ ಎಂಬಾಕೆಯ ಜೊತೆ ಮಹೇಶ್ವರ ಸಪ್ತಪದಿ ತುಳಿದಿದ್ದ. ಆದರೆ ಮದುವೆಯಾದ ಮೇಲೆ ಹೆಂಡತಿ ಕವನಾ ಪ್ರತಿದಿನ ಟಾರ್ಚರ್‌ ಕೊಡುತ್ತಿದ್ದಳು. ನಾನು ಐಷಾರಾಮಿ ಜೀವನ ನಡೆಸಬೇಕು. ನನಗೆ ಚಿನ್ನಾಭರಣ ಬೇಕು ಎಂದು ಪ್ರತಿ ನಿತ್ಯ ಪೀಡಿಸುತ್ತಿದ್ದು ಎನ್ನಲಾಗಿದೆ. ಇದಕ್ಕೆ ಮಹೇಶ್ವರ ಸ್ಪಂದಿಸದಿದ್ದಾಗ ಅವಾಚ್ಯ ಶಬ್ದಗಳಿಂದ ಕವನಾ ನಿಂದಿಸುತ್ತಿದ್ದಳು ಎಂಬ ಆರೋಪ ಸಹ ಇದೆ.

Ad Widget . Ad Widget .

ಗಂಡ ಹೆಂಡತಿ ಜಗಳ ತಾರಕಕ್ಕೇರಿದ್ದರಿಂದ ಇಬ್ಬರ ಕುಟುಂಬದ ಹಿರಿಯರು ಬುದ್ದಿವಾದ ಹೇಳಿದ್ದರು. ಆದರೆ ಕವನಾ ಮಾತ್ರ ಹಿರಿಯರಿಗೂ ಬೆಲೆ ಕೊಡದೆ ಅವಮಾನಿಸಿದ್ದಳು ಎನ್ನಲಾಗಿದೆ. ಹೆಂಡತಿ ವರ್ತನೆಯಿಂದ ಬೇಸತ್ತು ಮಹೇಶ್ವರ ಮಾನಸಿಕ ಹಿಂಸೆ ಅನುಭವಿಸಿದ್ದ. ಪ್ರತಿದಿನ ಹೆಂಡತಿ ಕಿರುಕುಳ ತಾಳಲಾಗದೇ ಕಳೆದ ಐದು ದಿನಗಳ ಹಿಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿದ್ದಾನೆ.

ಇತ್ತ ಮಹೇಶ್ವರನ ಕುಟುಂಬಸ್ಥರು ಕವನಾ ಕಿರುಕುಳವೇ ಮಹೇಶ್ವರನ ಆತ್ಮಹತ್ಯೆಗೆ ಕಾರಣ ಎಂದು ದೂರಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಜ್ಞಾನಭಾರತಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Leave a Comment

Your email address will not be published. Required fields are marked *