Ad Widget .

ಉದ್ಯಮಕ್ಷೇತ್ರದತ್ತ ನಟ ಶಾರೂಖ್ ಪುತ್ರ| ವೋಡ್ಕಾ‌ ಜೊತೆ‌ ಕೈ ಜೋಡಿಸಿದ ಆರ್ಯನ್ ಖಾನ್

ಸಮಗ್ರ ನ್ಯೂಸ್: ಬಾಲಿವುಡ್ ನಟ ಶಾರುಖ್​ ಖಾನ್​ ಮಗ ಆರ್ಯನ್ ಖಾನ್ ಸಿನಿಮಾ ನಂತರ ಇದೀಗ ಉದ್ಯಮ ಕ್ಷೇತ್ರಕ್ಕೂ ಕಾಲಿಡುವುದಾಗಿ ಘೋಷಿಸಿದ್ದಾರೆ.

Ad Widget . Ad Widget .

ವಿಶ್ವದ ಅತಿದೊಡ್ಡ ಮದ್ಯ ತಯಾರಿಕಾ ಕಂಪನಿ ಜತೆ ಕೈಜೋಡಿಸಿ ಭಾರತದಲ್ಲಿ ಪ್ರೀಮಿಯಂ ವೋಡ್ಕಾ ಬ್ರ್ಯಾಂಡ್ ಬಿಡುಗಡೆ ಮಾಡಲಿದ್ದಾರೆ ಎಂದು ವರದಿಯಾಗಿದೆ. ಬಂಟಿ ಸಿಂಗ್ ಹಾಗೂ ಲೆಟಿ ಬ್ಲಾಗೋವಾ ಸಹಭಾಗಿತ್ವದಲ್ಲಿ ಪ್ರೀಮಿಯಂ ವೋಡ್ಕಾ ಬ್ರ್ಯಾಂಡ್ ಬಿಡುಗಡೆ ಮಾಡಲಿದ್ದಾರೆ ಆರ್ಯನ್ ಖಾನ್. ನಂತರ ದೇಶದಾದ್ಯಂತ ಮಾರುಕಟ್ಟೆಯನ್ನು ವಿಸ್ತರಿಸುವ ಬಗ್ಗೆ ಅವರು ಚಿಂತನೆ ನಡೆಸಿದ್ದಾರೆ ಎಂದು ವರದಿಯಾಗಿದೆ.

Ad Widget . Ad Widget .

‘ಸ್ಲ್ಯಾಬ್ ವೆಂಚರ್ಸ್’ ಎಂಬ ಕಂಪನಿಯೊಂದನ್ನು ಅವರು ಈಗಾಗಲೇ ಆರಂಭಿಸಿದ್ದಾರೆ. ಈ ಕಂಪನಿಯು ವಿತರಣೆ ಮತ್ತು ಮಾರುಕಟ್ಟೆ ಉದ್ದೇಶಗಳಿಗಾಗಿ ವಿಶ್ವದ ಅತಿದೊಡ್ಡ ಮದ್ಯ ತಯಾರಿಕಾ ಕಂಪನಿ ಎಬಿ ಇನ್​ಬಿವ್ ಜತೆ ಸಹಭಾಗಿತ್ವ ಹೊಂದಿದೆ ಎಂದು ‘ಲೈವ್​ಮಿಂಟ್’ ವರದಿ ಉಲ್ಲೇಖಿಸಿದೆ. ಪ್ರಸ್ತುತ ಮಾರುಕಟ್ಟೆ ಪ್ರದೇಶದಲ್ಲಿ ಒಂದು ನಿರ್ವಾತ ಪ್ರದೇಶ ಸೃಷ್ಟಿಯಾಗಿದೆ ಎಂದು ಭಾವಿಸುತ್ತೇನೆ. ಇದು ಒಂದು ಅವಕಾಶ. ಉದ್ಯಮ ಎಂಬುದು ಅವಕಾಶಕ್ಕೆ ಸಂಬಂಧಿಸಿದ್ದು ಎಂಬುದು ನನ್ನ ಭಾವನೆ ಎಂದು ಆರ್ಯನ್ ಖಾನ್ ಹೇಳಿರುವುದಾಗಿ ವರದಿ ತಿಳಿಸಿದೆ.

Leave a Comment

Your email address will not be published. Required fields are marked *