Ad Widget .

ಮಂಗಳೂರು ಕಾಂಗ್ರೆಸ್ ಗೆಲುವಿಗೆ ವಾಸ್ತುದೋಷ!? ಮೆಟ್ಟಿಲು ಬದಲಾವಣೆಯಿಂದ ಬದಲಾಗುತ್ತಾ ‘ಕೈ’ ಪಕ್ಷದ ಹಣೆಬರಹ?

ಸಮಗ್ರ ನ್ಯೂಸ್: ಕರಾವಳಿಯಲ್ಲಿ ಈ ಬಾರಿ ಕಾಂಗ್ರೆಸ್ ಗೆಲುವುದಕ್ಕೆ ಎಲ್ಲಾ ರೀತಿಯ ಶ್ರಮ ಹಾಕಲಾಗುತ್ತಿದೆ ಅದಕ್ಕಾಗಿ ಮಂಗಳೂರಿನ ಕಾಂಗ್ರೆಸ್ ಕಚೇರಿಯ ವಾಸ್ತು ಬದಲಾವಣೆಗೂ ಪಕ್ಷದ ನಾಯಕರು ಮುಂದಾಗಿದ್ದಾರೆ.

Ad Widget . Ad Widget .

ವಾಸ್ತುಪ್ರಕಾರ ನಗರದ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಭವನದ ಮೆಟ್ಟಿಲುಗಳನ್ನು ಸ್ವಲ್ಪಮಟ್ಟಿಗೆ ಬದಲಾವಣೆ ಮಾಡಲಾಗಿದೆ. ಕಾಂಗ್ರೆಸ್ ಕಚೇರಿ ಕಟ್ಟಡದ ಪ್ರವೇಶ ದ್ವಾರದಲ್ಲಿ ಎಂಟು ಮೆಟ್ಟಿಲುಗಳಿದ್ದವು ಸಾಮಾನ್ಯವಾಗಿ ವಾಸ್ತು ಪದ್ಧತಿಯ ಪ್ರಕಾರ ಬೆಸ ಸಂಖ್ಯೆಯಲ್ಲಿ ಮೆಟ್ಟಿಲುಗಳನ್ನು ಕೊಡಲಾಗುತ್ತದೆ 3 ,5 ,7 ಹೀಗೆ ಮೆಟ್ಟಿಲುಗಳು ಸಂಖ್ಯೆ ಇರುತ್ತದೆ.

Ad Widget . Ad Widget .

ಅಗ್ರಿ ಮಲ್ಲಿಕಟ್ಟೆಯ ಕಾಂಗ್ರೆಸ್ ಕಚೇರಿಯಲ್ಲಿ ಎಂಟು ಮೆಟ್ಟಿಲುಗಳನ್ನು ಎರಡು ವರ್ಷದ ಹಿಂದೆ ಬಂದಿದ್ದ ವಾಸ್ತು ಶಾಸ್ತ್ರಜ್ಞ ಒಬ್ಬರು ಆಕ್ಷೇಪಿಸಿದರು , 2016ರಲ್ಲಿ ನೂತನ ಜಿಲ್ಲಾ ಕಾಂಗ್ರೆಸ್ ಭವನ ಉದ್ಘಾಟನೆ ಆದ ಬಳಿಕ 2019 ರಲ್ಲಿ ನಡೆದ ಚುನಾವಣೆಯಲ್ಲಿ ಎಂಟು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋತಿದ್ದು ,ಕಚೇರಿಗೆ ಹೋಗುವ ಬಾಗಿಲಲ್ಲಿಯೇ ಅಪವಾದ ಇದ್ದರೆ ಸೋಲಾಗದಿರುತ್ತೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಹೀಗಾಗಿ ಈ ಬಾರಿ ಚುನಾವಣೆಗೆ ಕೆಲವೇ ತಿಂಗಳ ಇರುವಾಗ ಮೆಟ್ಟಿಲುಗಳನ್ನು ಬದಲಿಸಿದ್ದು ಒಂದು ಮೆಟ್ಟಿಲು ಹೆಚ್ಚುವರಿಯಾಗಿ ಸೇರಿಸಲಾಗಿದೆ. ಎರಡು ದಿನಗಳಿಂದ ಮೆಟ್ಟಿಲು ಕಾಮಗಾರಿ ನಡೆಯುತ್ತಿದ್ದು ತರಾತುರಿಯಲ್ಲಿ ಕೆಲಸ ಸಾಗುತ್ತಿದೆ.

ಈ ಬಗ್ಗೆ ಪಕ್ಷದ ಹಿರಿಯ ಜಿಲ್ಲಾ ಸದಸ್ಯರು ಒಬ್ಬರಲ್ಲಿ ಕೇಳಿದಾಗ ಹಾಗೇನಿಲ್ಲ ಮೆಟ್ಟಿಲು ಅಡಿ ಭಾಗದಲ್ಲಿ ನೀರಿನ ವಾಟರ್ ಟ್ಯಾಂಕ್ ಇಡಲಾಗಿತ್ತು. ಅದು ಲೀಕೇಜ್ ಆಗಿತ್ತು ಅದನ್ನು ಕಲ್ಲು ತುಂಬಿಸಿ ಬಂದ್ ಮಾಡಲಾಗಿದ್ದು ಹೆಚ್ಚುವರಿ ಇರುವ ಜಾಗವನ್ನು ಫಿಲ್ ಮಾಡಲು ಒಂದು ಮೆಟ್ಟಿಲು ಮುಚ್ಚಿಸಲಾಗಿದೆ ಎಂದರು .ಇನ್ನೊಬ್ಬ ಸದಸ್ಯರಲ್ಲಿ ವಾಸ್ತು ಪ್ರಕಾರ ಮಾಡುತ್ತಿದ್ದಾರೆ ಎಂದು ಕೇಳಿದಾಗ ಹೌದು ಎಂದರು ವಾಸ್ತು ತಜ್ಞರು ಮೆಟ್ಟಿಲು ಈ ಭಾಗದಲ್ಲಿ ಇರಲೇಬಾರದು ಎಂದಿದ್ದಾರೆ. ಒಟ್ಟಾರೆ ಈ ಬದಲಾವಣೆಯಿಂದ ಪಕ್ಷದ ಹಣೆಬರಹ ಬದಲಾಗುತ್ತಾ ಕಾದುನೋಡಬೇಕಿದೆ.

ಅವರು ಹೇಳಿದ್ದನ್ನು ಎಲ್ಲಾ ಕೇಳಿದರೆ ಇಡೀ ಕಟ್ಟಡ ಬದಲಿಸಬೇಕಾಗಿದೆ ಸ್ವಲ್ಪಮಟ್ಟಿಗೆ ಬದಲಾವಣೆ ಮಾಡುತ್ತಿದ್ದೇವೆ. ಮೊದಲ ಮಹಡಿಯಲ್ಲೂ ಕೆಲವು ಬದಲಾವಣೆ ಸೂಚಿಸಿದ್ದಾರೆ ಜಿಲ್ಲಾಧ್ಯಕ್ಷರ ಚೇಂಬರ್ ಆ ಜಾಗದಲ್ಲಿ ಇರಬಾರದು ಎಂದಿದ್ದಾರೆ ಅದನ್ನು ಯಾವಾಗ ಬದಲಾವಣೆ ಮಾಡಲಾಗುತ್ತದೆ ಎಂದು ಗೊತ್ತಿಲ್ಲ ಎಂದರು.

Leave a Comment

Your email address will not be published. Required fields are marked *