Ad Widget .

ಸುಳ್ಯ: ವಿವಿಧ ಬೇಡಿಕೆ ಈಡೇರಿಕೆಗಾಗಿ ಅಂಬೇಡ್ಕರ್ ರಕ್ಷಣಾ ವೇದಿಕೆಯಿಂದ ತಾಲೂಕು ಕಚೇರಿ ಎದುರು ಪ್ರತಿಭಟನೆ

ಸಮಗ್ರ ನ್ಯೂಸ್: ವಿವಿಧ ಬೇಡಿಕೆ ಈಡೇರಿಕೆಗಾಗಿ ಅಂಬೇಡ್ಕರ್ ರಕ್ಷಣಾ ವೇದಿಕೆಯಿಂದ ಡಿ.೧೯ರಂದು ಸುಳ್ಯ ತಾಲೂಕು ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಅಂಬೇಡ್ಕರ್ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಸುಂದರ ಪಾಟಾಜೆ ಹೇಳಿದ್ದಾರೆ.

Ad Widget . Ad Widget .

ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಸುಳ್ಯ ತಾಲೂಕಿನಲ್ಲಿ ಒಟ್ಟು ೭೦೦ ಎಕ್ರೆ ಡಿಸಿ ಮನ್ನಾಜಾಗ ಇದೆ. ಅದರಲ್ಲಿ ೩೦೦ ಎಕ್ರೆ ಮಾತ್ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸಿಕ್ಕಿದೆ. ಉಳಿದ ಜಾಗವೆಲ್ಲ ಮೇಲ್ವರ್ಗದವರು ರೆಕಾರ್ಡ್ ಮಾಡಿಕೊಂಡಿದ್ದಾರೆ. ಇದನ್ನು ಸರ್ವೆ ಮಾಡಿ ಪ.ಜಾತಿ ಮತ್ತು ಪ.ಪಂಗಡ ದವರಿಗೆ ನೀಡಬೇಕು ಎಂದು ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಿದರು ಯಾವುದೇ ಕ್ರಮ ಕೈಗೊಂಡಿಲ್ಲ. ಗಾಂಧಿನಗರದ ಡಿಸಿ ಮನ್ನಾ ಜಾಗದಲ್ಲಿ ೧೩ ಮೇಲ್ವರ್ಗದ ಕುಟುಂಬದವರಿಗೆ ರೆಕಾರ್ಡ್ ಮಾಡಿ ಕೊಟ್ಟಿದ್ದು, ಅದನ್ನು ರದ್ದು ಮಾಡಬೇಕೆಂದು ಅವರು ಒತ್ತಾಯಿಸಿದರು. ೩೮೧/೨ ಈ ಸರ್ವೆ ನಂಬರ್ ಜಾಗದಲ್ಲಿ ದಲಿತರಾದ ದಾಸಪ್ಪ ಮೇನಾಲ ಎಂಬವರು ಸುಮಾರು ೪೦ ವರ್ಷಗಳಿಂದ ಈ ಜಾಗದಲ್ಲಿ ವಾಸವಾಗಿದ್ದಾರೆ. ಹಲವು ವರ್ಷಗಳಿಂದ ಅಕ್ತಮ ಸಕ್ರಮಕ್ಕೆ ಅರ್ಜಿ ಹಾಕಿದದರು ರೆಕಾರ್ಡ್ ಮಾಡಿ ಕೊಟ್ಟಿಲ್ಲ. ಆ ಜಾಗದ ಸುತ್ತ ಎಲ್ಲರಿಗೂ ರೆಕಾರ್ಡ್ ಆಗಿದೆ. ಇವರಿಗೆ ಮಾತ್ರ ಕೊಟ್ಟಿಲ್ಲ ಎಂದು ಹೇಳಿದರು.

Ad Widget . Ad Widget .

ಉಬರಡ್ಕ ಮಿತ್ತೂರು ಗ್ರಾಮದ ಕೊಡಿಯಾಲಬೈಲು ದಲಿತ ಕಾಲೊನಿಗೆ ಸ್ವಚ್ಛ ಭಾರತ ಮಿಷನ್ ಯೋಜನೆ ಅಡಿಯಲ್ಲಿ ಶೌಚಾಲಯ ಮತ್ತು ಸ್ಥಾನ ಘಟಕದ ಸಂಕೀಣ ಕಟ್ಟಡ ಕೊಡಿಯಾಲ ಬೈಲು ದಲಿತ ಕಾಲೊನಿಗೆ ಬಂದಿದ್ದನ್ನು ಸ್ಥಳ ಬದಳಾವಣೆ ಮಾಡಿ ಹಿಂದೂ ರುದ್ರಭೂಮಿ ಒಳಗೆ ನಿರ್ಮಿಸಿದ್ದಾರೆ. ಇದರ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ ಎಂದು ಸಂಬಂಧಪಟ್ಟ ಇಲಾಖೆಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡಿದರು ಯಾವುದೇ ಕ್ರಮ ಕೈಗೊಂಡಿಲ್ಲ. ಮಾಲಡ್ಕದಲ್ಲಿ ಸೇತುವೆ ನಿರ್ಮಿಸಿಲ್ಲ, ಅರಮನೆಗಯಲ್ಲಿ ೧೦೦ಕ್ಕೂ ಹೆಚ್ಚು ಮನೆಗಳವರು ನಡೆದುಕೊಂಡು ಹೋಗುವಲ್ಲಿ ಸೇತುವೆ ಆಗಿಲ್ಲ, ಯಾವಟೆ ಕಟ್ಟಕೋಡಿ ಸಂಪರ್ಕ ರಸ್ತೆ ಕಾಂಕ್ರೀಟೀಕರಣ ಮತ್ತು ಮಂಜಿಕಾನ ಬದನೆಕಜೆ ಸಂಪರ್ಕ ರಸ್ತೆ ಅಭಿವೃದ್ಧಿ, ತಾಲೂಕು ಕಚೇರಿ ಮುಂಭಾಗ ಅಂಬ್ಡ್ಕೇರ್ ಪ್ರತಿಮೆ ನಿರ್ಮಾಣ ಹೀಗೆ ೧೦ಕ್ಕೂ ಅಧಿಕ ಬೇಡಿಕೆ ಮುಂದಿಟ್ಟು ಪ್ರತಿಭಟನೆ ನಡೆಸುತ್ತೇವೆ. ಈಡೇರದಿದ್ದರೆ ಧರಣಿ ನಡೆಸಲಾಗುವುದು ಎಂದವರು ಹೇಳಿದರು.

ಸಂಘಟನೆಯ ಪ್ರಮುಖರಾದ ಪರಮೇಶ್ವರ ಕೆಮ್ಮಿಂಜೆ, ಬಾಲಕೃಷ್ಣ ಅರಮನೆಗಯ, ನವೀನ್ ಅರಮನೆಗಯ, ತೇಜಕುಮಾರ್ ಅರಮನೆಗಯ, ರಮೇಶ್ ಕೊಡೆಂಕಿರಿ, ರಾಮಕೃಷ್ಣ ಇದ್ದರು.

Leave a Comment

Your email address will not be published. Required fields are marked *