Ad Widget .

ಸಾರ್ವಜನಿಕ ಸ್ಥಳಗಳನ್ನು ಯಾರು ರಕ್ಷಿಸುತ್ತಾರೆ? ‘ಕಾಂತಾರ’ ಪ್ರಭಾವದಿಂದ ಬರೆದ‌ ಉತ್ತರಕ್ಕೆ ಟೀಚರ್ಸ್ ಫುಲ್ ಶಾಕ್

ಸಮಗ್ರ ನ್ಯೂಸ್: ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಎಷ್ಟರ ಮಟ್ಟಿಗೆ ಮೋಡಿ ಮಾಡಿದೆ ಎನ್ನುವುದಕ್ಕೆ ಈ ವಿದ್ಯಾರ್ಥಿ ಬರೆದ ಉತ್ತರ ನೋಡಿದರೆ ಗೊತ್ತಾಗುತ್ತದೆ. ಕಾಂತಾರ ಸಿನಿಮಾ ಬಳಿಕ ದೈವ, ಗುಳಿಗ, ಪಂಜುರ್ಲಿ, ಭೂತಾರಾಧನೆ ಮೇಲಿನ ಜನರ ನಂಬಿಕೆ, ಭಕ್ತಿ ಮತ್ತಷ್ಟು ಜಾಸ್ತಿ ಆಗಿದೆ. ತನ್ನ ಊರು ಬಿಟ್ಟು ದೂರದ ಊರುಗಳಲ್ಲಿ ವಾಸಿಸುತ್ತಿರುವವರು ಸಹ ಹುಟ್ಟೂರಿಗೆ ಬಂದು ದೈವಾರಾಧನೆ, ಭೂತ, ಕೋಲದಲ್ಲಿ ಭಾಗಿಯಾಗುತ್ತಿದ್ದಾರೆ. ಕಾಂತಾರ ಸಿನಿಮಾ ಮಕ್ಕಳಿಂದ ದೊಡ್ಡವರ ವರೆಗೂ ಪ್ರಭಾವ ಬೀರಿದ ಸಿನಿಮಾವಾಗಿದೆ. ಅಭಿಮಾನಿಗಳ ಜೊತೆಗೆ ಸಿನಿಮಾ ಗಣ್ಯರು ಸಹ ಕಾಂತಾರ ಚಿತ್ರಕ್ಕೆ ಫಿದಾ ಆಗಿದ್ದಾರೆ.

Ad Widget . Ad Widget .

ಇದೀಗ ಕಾಂತಾರ ಎಫೆಕ್ಟ್ ಎಷ್ಟರ ಮಟ್ಟಿಗೆ ಇದೆ ಎಂದರೆ 3ನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ಉತ್ತರ ಪತ್ರಿಕೆಯಲ್ಲಿ ಕಾಂತಾರದ ಉತ್ತರ ಬರೆಯುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.

Ad Widget . Ad Widget .

ರಿಷಬ್ ಶೆಟ್ಟಿ ಸಿನಿಮಾ ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆ ಎನ್ನುವುದಕ್ಕೆ ಈ ವಿದ್ಯಾರ್ಥಿಯ ಉತ್ತರನೇ ಸಾಕ್ಷಿ. ಅಷ್ಟಕ್ಕೂ ಮೂರನೇ ತರಗತಿ ವಿದ್ಯಾರ್ಥಿ ಮಾಡಿದ್ದೇನು ಗೊತ್ತಾ?. ಪರೀಕ್ಷೆಯಲ್ಲಿ ‘ಸಾರ್ವಜನಿಕ ಸ್ಥಳಗಳನ್ನು ಯಾರು ರಕ್ಷಿಸುತ್ತಾರೆ? ತಿಳಿದು ಬರೆ’ ಎಂದು ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ವಿದ್ಯಾರ್ಥಿ ಬರೆದ ಉತ್ತರ ನೋಡಿ ಶಿಕ್ಷಕರು ಶಾಕ್ ಆಗಿದ್ದಾರೆ. ಅಲ್ಲದೇ ಆ ಉತ್ತರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಂದಹಾಗೆ ವಿದ್ಯಾರ್ಥಿ ಉತ್ತರ ಹೀಗಿತ್ತು, ‘ಕ್ಷೇತ್ರಪಾಲ, ಗುಳಿಗಾ ಮತ್ತು ದೈವ’ ಎಂದು ಬರೆದಿದ್ದಾನೆ. ಪುಟ್ಟ ಬಾಲಕ ಪರೀಕ್ಷೆಯಲ್ಲಿ ಬರೆದ ಉತ್ತರ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕಾಂತಾರದ ಕೊನೆಯ ಭಾಗದಲ್ಲಿ ಬರುವ ಈ ಡೈಲಾಗ್ ಅನ್ನೇ ವಿದ್ಯಾರ್ಥಿ ಉತ್ತರವಾಗಿ ಕೊಟ್ಟಿದ್ದು, ಇದನ್ನು ನೋಡಿದ ಶಿಕ್ಷಕರು ಪುಲ್ ಶಾಕ್ ಆಗಿದ್ದಂತೂ ಸತ್ಯ.

Leave a Comment

Your email address will not be published. Required fields are marked *