Ad Widget .

ಲಾಡ್ಜ್ ನಲ್ಲಿ ಪತ್ತೆಯಾಯ್ತು ವ್ಯಕ್ತಿಯ ನಗ್ನ ಮೃತದೇಹ|

ಸಮಗ್ರ ನ್ಯೂಸ್: ಮಂಗಳೂರು ನಗರದ ಲಾಡ್ಜ್‌ ಒಂದರಲ್ಲಿ ವ್ಯಕ್ತಿಯ ನಗ್ನಶವ ಪತ್ತೆಯಾಗಿದೆ. ಆತ ನಗ್ನನಾಗಿರುವ ಸ್ಥಿತಿಯಲ್ಲಿ ಸಾವನ್ನಪ್ಪಿದ್ದು ಹೇಗೆ? ಆತನ ಸಾವಿಗೆ ಮುನ್ನ ಆ ಲಾಡ್ಜ್‌ ಕೋಣೆಗೆ ಬಂದು ಹೋದ ಮಹಿಳೆ ಯಾರು ಎನ್ನುವ ವಿಚಾರದಲ್ಲಿ ಈಗ ತನಿಖೆ ಸಾಗಿದೆ. ಜತೆಗೆ ಕೋಣೆಯಲ್ಲಿ ಸಿಕ್ಕಿದ ಮಾತ್ರೆಯೇ ಮುಳುವಾಯಿತೇ ಎನ್ನುವ ಚರ್ಚೆಯೂ ಇದೆ.

Ad Widget . Ad Widget .

ಮಂಗಳೂರಿನ ಪಂಪ್ ವೆಲ್ ಬಳಿಯ ಪದ್ಮಶ್ರೀ ಲಾಡ್ಜ್‌ನಲ್ಲಿ ಈ ಶವ ಪತ್ತೆಯಾಗಿದೆ. ಇದು ಕಾಸರಗೋಡಿನ ಉಪ್ಪಳ ನಿವಾಸಿ ಅಬ್ದುಲ್ ಕರೀಮ್ ಎಂಬವರ ಶವ ಎಂದು ದಾಖಲೆಗಳ ಆಧಾರದಲ್ಲಿ ಗುರುತಿಸಲಾಗಿದೆ.

Ad Widget . Ad Widget .

ಅಬ್ದುಲ್‌ ಕರೀಂ ಸೋಮವಾರ ಬೆಳಗ್ಗೆ ಬಂದು ಲಾಡ್ಜ್‌ನಲ್ಲಿ ರೂಂ ಪಡೆದಿದ್ದ. ಮಂಗಳವಾರವೂ ಆತ ಹೊರಬಾರದೆ ಇದ್ದಾಗ ಲಾಡ್ಜ್‌ ಸಿಬ್ಬಂದಿ ಹೋಗಿ ಪರಿಶೀಲನೆ ನಡೆಸಿದ್ದಾರೆ. ಆಗ ಮೈಯಲ್ಲಿ ಬಟ್ಟೆಯೇ ಇಲ್ಲದೆ ನಗ್ನ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದ. ಕೋಣೆಯಲ್ಲಿ ಆಯುರ್ವೇದಿಕ್ ಟ್ಯಾಬ್ಲೆಟ್ಸ್ ಪತ್ತೆಯಾಗಿದೆ.

ಕಂಕನಾಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ತಪಾಸಣೆ ನಡೆಸಿದರು. ಸ್ಥಳಕ್ಕೆ ಪೊಲೀಸ್ ಕಮಿಷನರ್ ಎನ್‌.ಶಶಿಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಈ ನಡುವೆ ಕರೀಂನ ಮನೆಯವರು ಕೂಡಾ ಲಾಡ್ಜ್‌ಗೆ ಬಂದಿದ್ದು, ಇದೊಂದು ಅನುಮಾನಾಸ್ಪದ ಸಾವು ಎಂದು ದೂರು ನೀಡಿದ್ದಾರೆ. ಇದರ ಆಧಾರದಲ್ಲೇ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಈ ನಡುವೆ, ಸೋಮವಾರ ಮಧ್ಯಾಹ್ನ ಕರೀಂ ತಂಗಿದ್ದ ಲಾಡ್ಜ್‌ ರೂಮಿಗೆ ಒಬ್ಬ ಮಹಿಳೆ ಬಂದಿರುವುದು ಸಿಸಿ ಟಿವಿ ಫೂಟೇಜ್‌ ಪರಿಶೀಲನೆ ವೇಳೆ ಗೊತ್ತಾಗಿದೆ. ಮಧ್ಯಾಹ್ನ 1.30ಕ್ಕೆ ಬಂದಿದ್ದ ಆಕೆ2.30ಕ್ಕೆ ವಾಪಸ್‌ ಆಗಿದ್ದಳು. ಈ ನಡುವೆ ಏನಾಗಿದೆ ಎನ್ನುವ ಸಂಗತಿಯ ಸುತ್ತ ಪೊಲೀಸ್‌ ತನಿಖೆ ನಡೆಯಬೇಕಿದೆ.

Leave a Comment

Your email address will not be published. Required fields are marked *