Ad Widget .

ರಾತ್ರಿ 11 ಗಂಟೆ ನಂತರ ಪತಿ-ಪತ್ನಿ ಜೊತೆಯಾಗಿ ಓಡಾಡಿದ್ರೆ ₹.3000 ಫೈನ್| ಹೀಗೊಂದು ದಂಡ ರೂಪದ ಸುಲಿಗೆ!?

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಹೊಯ್ಸಳ ಪೊಲೀಸರ ವಿರುದ್ಧ ಸುಲಿಗೆ ಆರೋಪ ಕೇಳಿ ಬಂದಿದ್ದು, ಪೊಲೀಸರು ಸ್ನೇಹಿತರ ಜತೆ ಪಾರ್ಟಿ ಮುಗಿಸಿ , ಮಾನ್ಯತಾ ಟೆಕ್​ಪಾರ್ಕ್​ ಬಳಿ ಮಧ್ಯರಾತ್ರಿ ಬರುತ್ತಿದ್ದ ಕಾರ್ತಿಕ್ ಪೆತ್ರಿ, ಪತ್ನಿ ದಂಪತಿಯನ್ನು ತಡೆದು 3000ಕ್ಕೆ ಬೇಡಿಕೆ ಇಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

Ad Widget . Ad Widget .

ಬೆಂಗಳೂರಲ್ಲಿ ಹೊಯ್ಸಳ ಪೊಲೀಸರ ವಿರುದ್ಧ ಸುಲಿಗೆ ಆರೋಪ ಕೇಳಿ ಬಂದಿದ್ದು, ಮಾನ್ಯತಾ ಟೆಕ್​ಪಾರ್ಕ್​ ಬಳಿ ಸ್ನೇಹಿತರ ಜತೆ ಪಾರ್ಟಿ ಮುಗಿಸಿ ಬರುತ್ತಿದ್ದ ಕಾರ್ತಿಕ್ ಪೆತ್ರಿ, ಪತ್ನಿ ಯನ್ನ ಮಧ್ಯರಾತ್ರಿ ದಂಪತಿ ತಡೆದ ಪೊಲೀಸರು , 3000ಕ್ಕೆ ಬೇಡಿಕೆ ಇಟ್ಟಿದ್ದಾರೆ. ದಂಪತಿ ಹಣ ಕೊಡುವುದಿಲ್ಲ ಎಂದಾಗ ಪೊಲೀಸರಿಂದ ಬೆದರಿಕೆ ಹಾಕಿದ್ದು, ಬಳಿಕ ದಂಪತಿ 1000 ರೂ. ಡಿಜಿಟಲ್ ಪೇಮೆಂಟ್​ ಮಾಡಿದ್ದಾರೆ.

Ad Widget . Ad Widget .

1000 ರೂ. ಕೊಟ್ಟ ಬಳಿಕ ದಂಪತಿಯನ್ನು ಪೊಲೀಸರು ಬಿಟ್ಟಿದ್ದು, ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಆದರೆ ದಂಪತಿ ಬಳಿ ಏಕೆ ಹಣ ಪಡೆದಿದ್ದಾರೆ ಅನ್ನೋದು ಗೊತ್ತಿಲ್ಲ , ಇದರಿಂದ ನೊಂದ ಕಾರ್ತಿಕ್ ಈ ಬಗ್ಗೆ ಟ್ವೀಟ್​​ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ. ಪೊಲೀಸರು 11 ಗಂಟೆ ನಂತರ ಹೊರಗೆ ಒಡಾಡಬಾರದು ಎಂದಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ ಅವರು, ಮುಗ್ದ ದಂಪತಿಯಿಂದ ರಾತ್ರಿ ವೇಳೆ ಸಂಚಾರ ಮಾಡಬಾರದು ಎಂದು ಹೇಳಿ ಹೊಯ್ಸಳ ಪಡೆಯ ಸಿಬ್ಬಂದಿ ಹಣ ಪಡೆದಿದ್ದರು. ಇದರ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಹೆಡ್‌ ಕಾನ್ಸ್‌ಸ್ಟೇಬಲ್ ರಾಜೇಶ್, ಪೊಲೀಸ್‌ ಕಾನ್ಸ್‌ಸ್ಟೇಬಲ್ ನಾಗೇಶ್ ಅವರನ್ನು ಅಮಾನತು ಮಾಡಲಾಗಿದೆ. ಇನ್ನು ಹಣವನ್ನು ಕೊಟ್ಟ ಸಂತ್ರಸ್ಥರಿಂದ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ ಎಂದು ಮಾಹಿತಿ ನೀಡಿದರು.

Leave a Comment

Your email address will not be published. Required fields are marked *