Ad Widget .

ನಟ ದರ್ಶನ್ ಅಭಿನಯದ “ಕ್ರಾಂತಿ” ಗೆ ಬಾಯ್ಕಾಟ್ ಬಿಸಿ| ಟ್ವಿಟರ್ ನಲ್ಲಿ ಭಾರೀ ವಿರೋಧ ಮಾಡ್ತಿರೋದು ಯಾಕೆ ಗೊತ್ತಾ?

ಸಮಗ್ರ ನ್ಯೂಸ್: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೊಟ್ಟ ಹೇಳಿಕೆ ʼಕ್ರಾಂತಿʼ ಚಿತ್ರಕ್ಕೆ ಮುಳುವಾಗುವಂತಿದೆ. ಈಗಾಗಲೇ ಸೋಷಿಯಲ್‌ ಮೀಡಿಯಾದಲ್ಲಿ ʼಬಾಯ್ಕಾಟ್‌ ಕ್ರಾಂತಿʼ ಎಂಬ ಹ್ಯಾಷ್‌ ಟ್ಯಾಗ್‌ ಸದ್ದು ಮಾಡಲು ಪ್ರಾರಂಭಿಸುತ್ತಿದೆ. ಹೀಗೆ ಮುಂದುವರೆದರೆ ದಚ್ಚು ಸಿನಿಮಾದ ವಿರುದ್ಧ ಬಾಯ್ಕಾಟ್‌ ʼಕ್ರಾಂತಿʼ ಶುರುವಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎನ್ನಲಾಗುತ್ತಿದೆ.

Ad Widget . Ad Widget .

‘ಕ್ರಾಂತಿ’ ಸಿನಿಮಾ ಬಿಡುಗಡೆ ದಿನಾಂಕ ಸಮೀಪಿಸುತ್ತಿದೆ. ನಿನ್ನೆ ತಾನೇ ಚಿತ್ರದ ʼಧರಣಿʼ ಎಂಬ ಹಾಡು ಬಿಡುಗಡೆಯಾಗಿದೆ. ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಿರುವಾಗ ಸಂದರ್ಶನ ಒಂದರಲ್ಲಿ ನಟ ದರ್ಶನ ಹೇಳಿರುವ ಮಾತು ಹಿಂದೂ ಪರ ಸಂಘಟನೆ ಸೇರಿದಂತೆ ಕೆಲವು ಜನರ ಕೋಪಕ್ಕೆ ಗುರಿಯಾಗಿದೆ. ಅಲ್ಲದೆ, ದರ್ಶನ್‌ ಸಿನಿಮಾ ಕ್ರಾಂತಿ ವಿರುದ್ಧ ಸೋಷಿಯಲ್‌ ಮೀಡಿಯಾದಲ್ಲಿ ಬಾಯ್ಕಾಟ್‌ ಎಂಬ ಪದ ಕೇಳಿ ಬರುವಂತೆ ಮಾಡಿದೆ.

Ad Widget . Ad Widget .

ಸಂದರ್ಶನವೊಂದರಲ್ಲಿ ದರ್ಶನ ಅವರು, ಅದೃಷ್ಟ ದೇವತೆ ಬಾಗಿಲು ತಟ್ಟುವುದು ಅಪರೂಪ, ಅಂತ ಸಮಯ ಬಂದ್ರೆ ಅದೃಷ್ಟ ದೇವತೆಯನ್ನು ಬೆಡ್‌ ರೂಮ್‌ಗೆ ಕರೆದುಕೊಂಡು ಹೋಗಿ ಬಟ್ಟೆ ಬಿಚ್ಚಿ ಕೂರಿಸಿಬಿಡಬೇಕು ಎಂದು ಹೇಳಿದ್ದರು. ಅವರು ಹೇಳಿದ್ದರ ಉದ್ದೇಶವೇ ಬೆರೆಯಾಗಿತ್ತು. ಅಂದರೆ ಒಳ್ಳೆಯ ಅವಕಾಶ ಒಂದಾಗ ಅದರ ಉಪಯೋಗ ಪಡೆಯಬೇಕು ಅಂತ ಅರ್ಥ. ಆದ್ರೆ ಅವರು ಹೇಳಿದ ವಿಧಾನ ಕೆಲವರ ಮನಸ್ಸಿಗೆ ನೋವು ಉಂಟು ಮಾಡಿದೆ. ಇನ್ನು ಟ್ಟಿಟರ್‌ನಲ್ಲಿ ದಚ್ಚು ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ

Leave a Comment

Your email address will not be published. Required fields are marked *