ಹತ್ತು ತಿಂಗಳ ಮಗುವನ್ನು ಕಾರಿನಿಂದ ಹೊರಗೆಸೆದು ಕೊಲೆ| ತಾಯಿ ಮೇಲೆ ಲೈಂಗಿಕ ದೌರ್ಜನ್ಯ

ಸಮಗ್ರ ನ್ಯೂಸ್: ಹತ್ತು ತಿಂಗಳ ಹೆಣ್ಣುಮಗುವನ್ನು ಕಾರಿನಿಂದ ಹೊರಕ್ಕೆಸೆದು ತಾಯಿಯ ಮೇಲೆ ಲೈಂಗಿಕ ಕಿರುಕುಳ ಎಸಗಿದ ಪ್ರಕರಣ ಮುಂಬೈ- ಅಹ್ಮದಾಬಾದ್ ಹೆದ್ದಾರಿಯ ಪಾಲ್ಗರ್ ಎಂಬಲ್ಲಿ ಶನಿವಾರ ನಡೆದಿದೆ. ತಾಯಿಯನ್ನೂ ಕಾರಿನಿಂದ ಹೊರಕ್ಕೆ ತಳ್ಳಲಾಗಿದ್ದು, ತಾಯಿಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸ್ ಮೂಲಗಳು ವರದಿ ಮಾಡಿವೆ.

Ad Widget ... ..

ಮಹಿಳೆ ಹಾಗೂ ಆಕೆಯ ಮಗಳು ವಾಡಾ ತಾಲೂಕಿನ ಪೊಶೆರೆ ಎಂಬಲ್ಲಿಗೆ ಕಾರಿನಲ್ಲಿ ಹೋಗುತ್ತಿದ್ದರು. ಇತರ ಕೆಲ ಪ್ರಯಾಣಿಕರ ಜತೆ ಕಾರಿನಲ್ಲಿ ಮಹಿಳೆ ಪ್ರಯಾಣಿಸುತ್ತಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಲಾಗಿದೆ. ಮಾರ್ಗಮಧ್ಯದಲ್ಲಿ ಕಾರಿನ ಚಾಲಕ ಮತ್ತು ಸಹ ಪ್ರಯಾಣಿಕರು ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದರು ಎಂದು ಆಪಾದಿಸಲಾಗಿದೆ.

Ad Widget

ಮಹಿಳೆ ಪ್ರತಿರೋಧ ತೋರಿದಾಗ, ಮಹಿಳೆಯ ಕೈಯಿಂದ ಮಗುವನ್ನು ಕಿತ್ತುಕೊಂಡು ವೇಗವಾಗಿ ಹೋಗುತ್ತಿದ್ದ ಕಾರಿನಿಂದ ಎಸೆದಿದ್ದರು ಎಂದು ಮಹಿಳೆ ಪೊಲೀಸರಿಗೆ ವಿವರಿಸಿದ್ದಾರೆ.

ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದು ಮಹಿಳೆಯನ್ನೂ ಕಾರಿನಿಂದ ಹೊರಕ್ಕೆ ತಳ್ಳಲಾಗಿದೆ. ಆಕೆಗೂ ಗಂಭೀರ ಗಾಯಗಳಾಗಿದ್ದು, ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಂಡ್ವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದು, ಇನ್ನೂ ಪತ್ತೆಯಾಗಿಲ್ಲ‌ ಎಂದು ಮಾಧ್ಯಮಗಳು ವರದಿ ಮಾಡಿವೆ.

Leave a Comment

Your email address will not be published. Required fields are marked *