ನಟ ಅನಿರುದ್ಧ್ – ಆರೂರು ಜಗದೀಶ್ ನಡುವಿನ ಭಿನ್ನಾಭಿಪ್ರಾಯ ಸುಖಾಂತ್ಯ| ಸಂಧಾನ ಸಭೆ ಯಶಸ್ವಿ

ಸಮಗ್ರ ನ್ಯೂಸ್: ಕಿರುತೆರೆ ನಿರ್ಮಾಪಕರು, ನಟ ಅನಿರುದ್ಧ್ ವಿವಾದ ಸುಖಾಂತ್ಯ ಕಂಡಿದೆ. ಅಸಮಾಧಾನ ಮರೆತು ಅನಿರುದ್ಧ್ ಮತ್ತು ನಿರ್ಮಾಪಕ, ನಿರ್ದೇಶಕ ಆರೂರು ಜಗದೀಶ್ ಒಂದಾಗಿದ್ದಾರೆ.

Ad Widget ... ..

ಕಳೆದ ನಾಲ್ಕು ತಿಂಗಳಿನಿಂದಲೂ ನಡೆಯುತ್ತಿದ್ದ ಜಟಾಪಟಿಗೆ ಅಧಿಕೃತವಾಗಿ ತೆರೆ ಬಿದ್ದಿದೆ. ಬೆಂಗಳೂರಿನಲ್ಲಿ ಹಿರಿಯರ ಸಮ್ಮುಖದಲ್ಲಿ ನಡೆದ ಸಂಧಾನ ಸಭೆ ಯಶಸ್ವಿಯಾಗಿದೆ.

Ad Widget

ನಿರ್ದೇಶಕ ಪಿ. ಶೇಷಾದ್ರಿ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ಯಶಸ್ವಿಯಾಗಿದೆ. ಸಭೆಯಲ್ಲಿ ಅನಿರುದ್ಧ್, ಕಿರುತೆರೆ ನಿರ್ಮಾಪಕ ಆರೂರು ಜಗದೀಶ್, ಕಿರುತೆರೆ ನಿರ್ಮಾಪಕರು, ನಿರ್ದೇಶಕರು, ಕರ್ನಾಟಕ ಟೆಲಿವಿಜನ್ ಅಸೋಸಿಯೇಷನ್ ಅಧ್ಯಕ್ಷ ಶಿವಕುಮಾರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

Leave a Comment

Your email address will not be published. Required fields are marked *